ನಿಮ್ಮ ವಾಟ್ಸಾಪ್ ಸುರಕ್ಷಿತವಾಗಿದೆಯೇ ಎನ್ನುವುದನ್ನು ತಿಳಿಯೋದು ಹೇಗೆ? | ಇಲ್ಲಿದೆ ಮಾಹಿತಿ

ತಂತ್ರಜ್ಞಾನಗಳು ಎಷ್ಟೇ ಮುಂದುವರಿದರೂ, ಅದರಲ್ಲಿ ನೂರಾರು ವೈಫಲ್ಯತೆಗಳು ಇದ್ದೇ ಇರುತ್ತವೆ. ಅಂತೆಯೇ ನಾವು ದಿನನಿತ್ಯ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವೈಯಕ್ತಿಕ ಗೌಪ್ಯತೆ ಮತ್ತು ಸುರಕ್ಷತೆಗಳನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ವಾಟ್ಸಾಪ್ ಹೊಸ ಫಿಚರ್ ಪರಿಚಯಿಸಿದೆ.
ಈ ಹೊಸ ಫಿಚರ್ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯ ಗೌಪ್ಯತೆಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ನಮ್ಮ ಮಾಹಿತಿಗಳನ್ನು ಯಾರು ನೋಡಿದ್ದಾರೆ ಎನ್ನುವುದನ್ನೂ ಚೆಕ್ ಮಾಡಿಕೊಳ್ಳಬಹುದಾಗಿದೆ.
ಹೊಸ ಫಿಚರ್ ಬಳಕೆ ಮಾಡೋದು?
ಮೊದಲಿಗೆ ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನುಓಪನ್ ಮಾಡಿಕೊಳ್ಳಿ.
ಸರ್ಚ್ ಆಪ್ಷನ್ ನ ಬದಿಯಲ್ಲಿರುವ 3 ಡಾಟ್ ಗೆ ಕ್ಲಿಕ್ ಮಾಡಿ, Settings ತೆರೆಯಿರಿ.
Settingsನಲ್ಲಿ Privacy ಎಂಬ ಆಪ್ಷನ್ ಕ್ಲಿಕ್ ಮಾಡಿ. ಈ ವೇಳೆ ಅಪ್ಲಿಕೇಷನ್ ನ ಟಾಪ್ ನಲ್ಲಿ Start checkup ಎಂಬ ಆಯ್ಕೆ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನೀವು ಯಾವೆಲ್ಲ ಗೌಪ್ಯತೆಗಳನ್ನು ಕಾಪಾಡಬೇಕು ಎನ್ನುವ ಎಲ್ಲ ಆಯ್ಕೆಗಳು ಅಲ್ಲಿರುತ್ತವೆ. ನಿಮಗೆ ಬೇಕಾದ Settings ಮಾಡಿಕೊಳ್ಳಬಹುದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth