ವಿಡಿಯೋದಲ್ಲಿದ್ದ ಗುಪ್ತಾಂಗ ಪ್ರಜ್ವಲ್ ರೇವಣ್ಣನದ್ದೇ ಎಂದು ಸಾಬೀತುಪಡಿಸಿದ್ದು ಹೇಗೆ?

prajwal revanna
03/08/2025

ಬೆಂಗಳೂರು: ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್‌ ರೇವಣ್ಣ(Prajwal Revanna)ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಪ್ರಜ್ವಲ್ ರೇವಣ್ಣ ತಾನು  ಅತ್ಯಾಚಾರ ಮಾಡುತ್ತಿದ್ದ ವೇಳೆ ಮಾಡಿಕೊಂಡಿರುವ ವಿಡಿಯೋದಲ್ಲಿ ಆತನ ಮುಖವನ್ನು ತೋರಿಸಿಲ್ಲವಾದರೂ ಆತನೇ ಅತ್ಯಾಚಾರ ನಡೆಸಿದ್ದಾನೆ ಎಂದು  ತನಿಖಾಧಿಕಾರಿಗಳು ಸಾಬೀತುಪಡಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಅಂಶಕ್ಕೆ ಇಲ್ಲಿದೆ ವಿವರಣೆ.

ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಬಿ.ಕೆ.ಸಿಂಗ್ ಈ ಬಗ್ಗೆ ಮಾತನಾಡಿ, ಅತ್ಯಾಚಾರದ ವಿಡಿಯೋಗಳನ್ನು ಇಟ್ಟುಕೊಂಡು ಪ್ರಜ್ವಲ್ ಸಂತ್ರಸ್ತರ ಮಹಿಳೆಯರನ್ನು ಬೆದರಿಸುತ್ತಿದ್ದ. ವಿಡಿಯೋ ಮೂಲಕ ಅವರನ್ನ ಮೌನವಾಗಿರುವಂತೆ ಮಾಡುತ್ತಿದ್ದ. ಆದರೆ, ಈ ವಿಡಿಯೋಗಳಲ್ಲಿ ಪ್ರಜ್ವಲ್ ಮುಖ ಮಾತ್ರ ಸೋರಿಸಿರಲಿಲ್ಲ. ಸೋರಿಕೆಯಾಗಿದ್ದ ಇತರೆ ವಿಡಿಯೋಗಳಲ್ಲಿದ್ದ ದೇಹಗಳ ಭಾಗಗಳು, ಪ್ರಸ್ತುತ ಅಪರಾಧ ಸಾಬೀತಾಗಿರುವ ಪ್ರಕರಣದ ವಿಡಿಯೋದಲ್ಲಿದ್ದ ದೇಹದ ಭಾಗಗಳೊಂದಿಗೆ ಜೋಡಿಸಿ, ಗುರ್ತಿಸಲು ವಿಧಿವಿಜ್ಞಾನ ಸಾಧನಗಳನ್ನು ಬಳಕೆ ಮಾಡಲಾಯಿತು ಎಂದಿದ್ದಾರೆ.

ತನಿಖೆ ವೇಳೆ ನಮ್ಮ ತಂಡ ಎರಡು ಅಂತರರಾಷ್ಟ್ರೀಯ ಪ್ರಕರಣ ಅಧ್ಯಯನ ನಡೆಸಿತು. ಸ್ಪ್ರಿಂಗರ್ ಮತ್ತು ಟರ್ಕಿಯ ಜರ್ನಲ್ ಆಫ್ ಫೋರೆನ್ಸಿಕ್ ಮೆಡಿಸಿನ್ & ಫೋರೆನ್ಸಿಕ್ ಸೈನ್ಸಸ್ ವಿಧಿವಿಜ್ಞಾನ, ಔಷಧ ಮತ್ತು ರೋಗಶಾಸ್ತ್ರದ ಮೂಲಕ ಶಿಶ್ನದ ಚಿತ್ರ ಹೋಲಿಕೆ ಮಾಡಿ ಅಪರಾಧಿಯನ್ನು ಗುರುತಿಸಿತ್ತು. ಈ ನಿಟ್ಟಿನಲ್ಲಿ ನಾವು ತನಿಖೆ ಆರಂಭಿಸಲು ಮುಂದಾಗಿದ್ದೆವು. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ವೈದ್ಯಕೀಯ ನೀತಿಶಾಸ್ತ್ರದ ಉಲ್ಲಂಘನೆಯನ್ನು ಉಲ್ಲೇಖಿಸಿ ಪ್ರಜ್ವಲ್ ಅವರ ಜನನಾಂಗದ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ತನಿಖೆ ಆರಂಭದಲ್ಲಿ ತಡೆಯನ್ನು ಎದುರಿಸುವಂತಾಗಿತ್ತು.

ಅಪರಾಧಿಯನ್ನು ವೈದ್ಯಕೀಯವಾಗಿ ಪರಿಶೀಲಿಸುವ ವೈದ್ಯರು, ಛಾಯಾಚಿತ್ರ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ ಎಂದು ಹೇಳಿದರು. ಬಳಿಕ ಬಲವಾದ ಕಾರಣಗಳನ್ನು ಉಲ್ಲೇಖಿಸಿ ಎಸ್‌ ಐಟಿ ನ್ಯಾಯಾಲಯದ ಅನುಮತಿಯನ್ನು ಕೋರಿತು. ನ್ಯಾಯಾಲಯದ ಅನುಮತಿಯೊಂದಿಗೆ, ಅತ್ಯಾಚಾರ ವೀಡಿಯೊದಲ್ಲಿನ ಪುರುಷ ಅಂಗವು ಪ್ರಜ್ವಲ್ ಅವರದ್ದೇ ಎಂದು ಪರಿಶೀಲಿಸಲು ಛಾಯಾಚಿತ್ರಗಳನ್ನು ತೆಗೆದುಕೊಂಡು ವಿಧಿವಿಜ್ಞಾನ ಪರೀಕ್ಷೆ ಮಾಡಲಾಯಿತು.

ಆರೋಪಿ ಮತ್ತು ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ರೂಪವಿಜ್ಞಾನದ ಲಕ್ಷಣಗಳನ್ನು, ಅವನ ಗುರುತನ್ನು ಹೊಂದಿಸಲು ಹೋಲಿಸಲಾಯಿತು. ಚರ್ಮದ ಗಾಯಗಳು (ನೆವಸ್), ಗಾಯದ ಗುರುತುಗಳು, ಪುರುಷ ಜನನಾಂಗಗಳ ಆಕಾರ, ಚರ್ಮದ ಬಣ್ಣ, ಕೂದಲಿನ ಮಾದರಿ, ವೀಡಿಯೊದಲ್ಲಿ ಬಹಿರಂಗಗೊಂಡ ದೇಹದ ಭಾಗಗಳ ಮೈಕಟ್ಟು, ಉದಾಹರಣೆಗೆ ಕೈ ಮುಂತಾದ ಹೋಲಿಕೆಗಳು/ವ್ಯತ್ಯಾಸಗಳನ್ನು ಪರಿಶೀಲಿಸಲಾಯಿತು. ಇದರಿಂದ ಅಪರಾಧಿಯನ್ನು ಗುರುತಿಸಲಾಯಿತು.

ಹದಿಹರೆಯದ ಹುಡುಗಿಯೊಬ್ಬಳೊಂದಿಗೆ ತನ್ನ ಜನನಾಂಗಗಳ ಛಾಯಾಚಿತ್ರವನ್ನು ಪ್ರಜ್ವಲ್ ನಲ್ಲಿ ಆನ್’ಲೈನ್ ನಲ್ಲಿ ಹಂಚಿಕೊಂಡಿದ್ದ. ಇದೂ ಕೂಡ ಪ್ರಕರಣದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡಿತು. ಚಿತ್ರದ ದಿನಾಂಕ ಮತ್ತು ಸಮಯದ ಜೊತೆಗೆ ಚಿತ್ರವನ್ನು ಹಂಚಿಕೊಂಡ ಕಂಪ್ಯೂಟರ್‌ ನ IP ವಿಳಾಸವನ್ನು ಬಳಸಿಕೊಂಡು ಅಪರಾಧಿಯನ್ನು ಪತ್ತೆ ಮಾಡಲಾಯಿತು. ವಿಧಿವಿಜ್ಞಾನ ವೈದ್ಯಕೀಯ ತಜ್ಞರು, ಚರ್ಮರೋಗ ತಜ್ಞರು ಮತ್ತು ಮೂತ್ರಶಾಸ್ತ್ರಜ್ಞರ ಸಹಾಯದಿಂದ ಅಪರಾಧಿಯನ್ನು ಗುರುತಿಸಲು ಚಿತ್ರದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಪ್ರಜ್ವಲ್ ಪ್ರಕರಣದಲ್ಲಿ, ಅತ್ಯಾಚಾರ ನಡೆದ ಅಪರಾಧದ ಸ್ಥಳವನ್ನು ಮರುಸೃಷ್ಟಿಸಲು ಫೋರೆನ್ಸಿಕ್ ಪರಿಕರಗಳನ್ನು ಸಹ ಬಳಸಲಾಯಿತು. ಅತ್ಯಾಚಾರ ನಡೆದ ಕೊಠಡಿಯಲ್ಲಿ ಗುರುತುಗಳ ಮರೆ ಮಾಚಲು ಪ್ರಯತ್ನಗಳು ನಡೆದಿತ್ತು. ಗೋಡೆಗಳಿಗೆ ಬಣ್ಣ ಬಳಿಯಲಾಗಿತ್ತು. ಆದರೆ, ಗುರುತುಗಳು ಹೋಗಿರಲಿಲ್ಲ. FSL ತಂಡವು ಬಹಳ ಎಚ್ಚರಿಕೆಯಿಂದ ಎಲ್ಲವನ್ನೂ ಪರಿಶೀಲಿಸಿತು. ಅಂತಿಮವಾಗಿ ನಮಗೆ ಸಾಕ್ಷ್ಯ ದೊರೆಯಿತು. ಈ ಪ್ರಕರಣದ ಸಂಪೂರ್ಣ ತನಿಖೆಯು ಬಹುತೇಕ ಡಿಜಿಟಲ್ ತಂತ್ರಜ್ಞಾನ ಮತ್ತು ವಿಧಿವಿಜ್ಞಾನ ಮತ್ತು ಪರೀಕ್ಷೆಯಿಂದ ಪಡೆದ ಪುರಾವೆಗಳ ಮೇಲೆ ನಿಂತಿದೆ ಎಂದು ವಿವರಿಸಿದರು.

ಅದು ಪ್ರಜ್ವಲ್‌ ನದ್ದೇ ಗುಪ್ತಾಂಗ..!

ಸಂಗ್ರಹಿಸಲಾಗಿದ್ದ ಸಾಕ್ಷ್ಯಗಳನ್ನು ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಿಖರ ವೈದ್ಯಕೀಯ ನೆರವಿನಿಂದ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿರುವ ಎಸ್‌ ಐಟಿಗೆ ಪ್ರಬಲ ಸಾಕ್ಷ್ಯ ದೊರೆತದ್ದೇ ವಿಡಿಯೊದಿಂದ. ಪ್ರಜ್ವಲ್ ಮಾಡಿಕೊಂಡಿದ್ದ ವಿಡಿಯೊದಲ್ಲಿ ಕಂಡಿದ್ದ ಶಿಶ್ನದ ಗಾತ್ರ, ಬಣ್ಣ, ಅಕಾರ ನಿಮಿರುವಿಕೆಯ ಸಾಮರ್ಥ್ಯ ಇತ್ಯಾದಿ… ಅಗತ್ಯ ಸಕಲಾಂಶಗಳನ್ನು ವಿಡಿಯೊದಲ್ಲಿ ಸೆರೆ ಹಿಡಿದಿದ್ದ ಚಿತ್ರದೊಂದಿಗೆ ಹೋಲಿಕೆ ಮಾಡಿದಾಗ ಅದು ಪ್ರಜ್ವಲ್‌ದೇ ಶಿಶ್ನ ಮತ್ತು ದುಷ್ಕೃತ್ಯ ಎಂಬ ನೈಜತೆ ಹೊರಹೊಮ್ಮಿರುವುದು ತನಿಖೆಯ ವಿಶೇಷ. ಈ ಅಂಶವನ್ನು ತೀರ್ಪಿನ 345ನೇ ಪುಟದಿಂದ ವಿಸ್ಕೃತವಾಗಿ ವಿವರಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version