ನನ್ನ ಗಂಡನ ಸ್ವಭಾವ ಬದಲಿಸಿದಂತೆ ಕ್ಷೇತ್ರವನ್ನು ಬದಲಿಸ್ತೇನೆ: ಬಿಹಾರ ಆರ್ ಜೆಡಿ ಅಭ್ಯರ್ಥಿ ವೀಣಾ ದೇವಿ ಹೇಳಿಕೆ
ಮೊಕಮಾ: ಗ೦ಡನ ಸ್ವಭಾವ ಬದಲಾಯಿಸಿದಂತೆ ಕ್ಷೇತ್ರವನ್ನೂ ಬದಲಿಸಿ ಸುಧಾರಿಸುತ್ತೇನೆ ಎಂದು ಬಿಹಾರದ ಮೊಕಮಾ ಕ್ಷೇತ್ರದ ಆರ್ ಜೆಡಿ ಅಭ್ಯರ್ಥಿ ವೀಣಾ ದೇವಿ ಹೇಳಿಕೆ ನೀಡಿದ್ದಾರೆ.
ಪಿಟಿಐಗೆ ಈ ಹೇಳಿಕೆ ನೀಡಿರುವ ಅವರು, ನಿತೀಶ್ ಕುಮಾರ್ ಅವರ ಆಡಳಿತದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಅಂದ ಹಾಗೆ ಮೊಕಮಾದ ಮಾಜಿ ಶಾಸಕರ ಪತ್ನಿಯಾಗಿರುವ ವೀಣಾ ದೇವಿ ಈ ಹಿಂದೆ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಪತಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲದಿರುವುದರಿಂದ, ವೀಣಾಗೆ ಆರ್ ಜೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನನ್ನ ಪತಿ ಈಗ ಕ್ರಿಮಿನಲ್ ಅಲ್ಲ, ಅವರು ಹಲವು ವರ್ಷ ಜನಪ್ರತಿನಿಧಿಯಾಗಿದ್ದವರು. ಪತಿಯ ಸ್ವಭಾವವನ್ನು ಬದಲಿಸಿದಂತೆ ಕ್ಷೇತ್ರವನ್ನೂ ಬದಲಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪತಿ ಸುರದ್ ಭವ್ ಸಿಂಗ್ ಈ ಹಿಂದೆ ಇದೇ ಕ್ಷೇತ್ರದ ಶಾಸಕರಾಗಿದ್ದರು. ಲೋಕ ಜನಶಕ್ತಿ ಪಕ್ಷದಿಂದ (ಎಲ್ ಜಿಪಿ) ಸಂಸದರೂ ಆಗಿದ್ದರು. ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. 2014–19ರ ವರೆಗೆ ವೀಣಾ ದೇವಿ ಎಲ್ ಜೆಪಿಯಿಂದ ಮುಂಗೇ ಕ್ಷೇತ್ರದ ಸಂಸದರಾಗಿದ್ದರು. ಈಗ ಆರ್ ಜೆಡಿಯಿಂದ ಮೊಕಮಾ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























