ಜನ ಬಯಸಿದ್ರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಪಿಎಸ್ ಐ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಹೇಳಿಕೆ

ಕಲಬುರಗಿ: ಜನ ಬಯಸಿದ್ರೆ ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಜ.20ರಂದು ಸಿಐಡಿ ಅಧಿಕಾರಿಗಳು ಆರೋಪಿ ರುದ್ರಗೌಡ ಪಾಟೀಲ್ ಅವರನ್ನು ಬಂಧಿಸಲು ಬಂದಿದ್ದ ವೇಳೆ ಅಧಿಕಾರಿಗಳನ್ನು ತಳ್ಳಿ ಹಾಕಿ ಅವರು ಪರಾರಿಯಾಗಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ.
ನಾನು ಎಲ್ಲಿಯೂ ಓಡಿ ಹೋಗಿಲ್ಲಾ, ಇಲ್ಲೇ ಇದ್ದೇನೆ. ಇಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇಡಿ ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ. ಆಗ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ನಾನು ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದೇನೆ ಅನ್ನೋದು ಸುಳ್ಳು ಎಂದು ಅವರು ಹೇಳಿದ್ದಾರೆ.
ಪಿಎಸ್ಐ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಸಹೋದರನನ್ನು ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣೆಗೆ ಬರಬಹುದು ಅನ್ನೋ ಭಯದಿಂದ ಸಿಲುಕಿಸಿದ್ದಾರೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತು ಕೇಳಿದ್ದಾರೆ. ಅವರ ಮಾತು ಕೇಳಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸುಳ್ಳು ಆರೋಪಕ್ಕೆ ನಾನು ಬೆದರೋದಿಲ್ಲಾ. ಅಫಜಲಪುರ ಜನರ ಸೇವೆಗಾಗಿ ನಾನು ಸದಾ ಸಿದ್ದ ಎಂದಿದ್ದಾರೆ.
ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದಿಂದ ನೂರಾರು ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದರೆ, ಇತ್ತ ಪ್ರಮುಖ ಆರೋಪಿ ಅಧಿಕಾರದ ಕನಸು ಕಾಣುತ್ತಿದ್ದಾನೆ. ಸಮಾಜಕ್ಕೆ ಸರ್ಕಾರ ಯಾವ ಸಂದೇಶ ನೀಡುತ್ತಿದೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw