ಇದ್ರಿಸ್ ಪಾಷಾ ಹತ್ಯೆ ಪ್ರಕರಣ: ಬಿಎಸ್ ಪಿ ನಾಯಕ ಕೆ.ಬಿ. ವಾಸು ಖಂಡನೆ

ಕನಕಪುರ: ಕನಕಪುರ ತಾಲ್ಲೂಕು, ಸಾತನೂರು ರಸ್ತೆ ಬಳಿ ಇದ್ರಿಸ್ ಪಾಷಾ ಎಂಬ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಯನ್ನು ಬಹುಜನ ಸಮಾಜ ಪಾರ್ಟಿ(BSP) ಗುರುಮಠಕಲ್ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ವಾಸು ಖಂಡಿಸಿದ್ದಾರೆ.
ಜಾನುವಾರು ಸಾಗಾಟ ಮಾಡುತ್ತಿದ್ದ ಎನ್ನುವ ಕಾರಣಕ್ಕಾಗಿ ಪುನೀತ್ ಕೆರೆ ಹಳ್ಳಿ ಮತ್ತು ಆತನ ಸಹಚರ ಕಿಡಿಗೇಡಿಗಳು ಇದ್ರಿಸ್ ಪಾಷಾನನ್ನು ಕೊಲೆ ಮಾಡಿದ್ದಾರೆ. ಈ ಘಟನೆಯನ್ನು ಬಹುಜನ ಸಮಾಜ ಪಾರ್ಟಿ ಕಟು ಶಬ್ದಗಳಿಂದ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೊಲೆಯಾದ ಇದ್ರಿಸ್ ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು. ಕೊಲೆ ಮಾಡಿದ ಆರೋಪಿಗಳನ್ನು ಯಾರೇ ಇರಲಿ 24 ಗಂಟೆ ಒಳಗಾಗಿ ಎಲ್ಲರನ್ನು ಬಂಧಿಸಬೇಕು ಮತ್ತೊಮ್ಮೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕೆಂದು ಸರ್ಕಾರಕ್ಕೆ ಈ ಮೂಲಕ ಎಚ್ಚರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw