ಬಂದೋಬಸ್ತ್ ನಲ್ಲಿ ನಿರತರಾಗಿದ್ದ ಪೊಲೀಸರಿಗೆ ನೀಡಿದ ಉಪಹಾರದಲ್ಲಿ ಸತ್ತ ಇಲಿ ಪತ್ತೆ

banglore
26/09/2023

ಪೊಲೀಸ್ ಬಂದೋಬಸ್ತಗೆ ನಿಯೋಜಿಸಿದ ಪೊಲೀಸರಿಗೆ ಅಸಮರ್ಪಕ ಆಹಾರವನ್ನು ಪೂರೈಕೆ ಮಾಡಿರುವುದು ಕಂಡುಬಂದಿದೆ.

ಯಶವಂತಪುರ ಸಂಚಾರಿ ಪೊಲೀಸರಿಗೆ ನೀಡಿದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಉಪಹಾರವೆಂದು ರೈಸ್ ಬಾತ್ ನೀಡಲಾಗಿದೆ. ಈ ವೇಳೆ ಪೊಲೀಸ್ ಆ ಪೊಟ್ಟಣವನ್ನು ಓಪನ್ ಮಾಡಿದಾಗ ಇಲಿ ಕಂಡು ಗಾಬರಿಯಾಗಿದ್ದಾರೆ.ಬಂದೋಬಸ್ತ್ ನಲ್ಲಿ ನಿರತರಾಗಿದ್ದ ಪೊಲೀಸರಿಗೆ ‘ಇಲಿ’ ಉಪಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version