4:20 AM Wednesday 22 - October 2025

ಸೆಲ್ಫಿ ತೆಗೆಯಲು ಮುಂದಾದ ಭಾರತೀಯ ಪ್ರವಾಸಿಗನ ಮೇಲೆ ದಾಳಿ ನಡೆಸಿದ ಹುಲಿ!

indian man attacked by tiger
30/05/2025

ಭಾರತೀಯ ಪ್ರವಾಸಿಗರೊಬ್ಬರು ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಹುಲಿ ದಾಳಿ ನಡೆಸಿರುವ ಘಟನೆ ಥೈಲ್ಯಾಂಡ್(Thailand) ನ ಫುಕೆಟ್ ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಫುಕೆಟ್(Phuket) ನಲ್ಲಿ ಹುಲಿಗಳನ್ನು ಸಾಕು ಪ್ರಾಣಿಗಳಂತೆ ಸಾಕುತ್ತಾರೆ. ಅಲ್ಲಿಗೆ ವಿವಿಧ ದೇಶಗಳಿಂದ ಪ್ರವಾಸಿಗರು ಬರುತ್ತಾರೆ ಮತ್ತು  ಹುಲಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು, ಆಹಾರ ನೀಡಬಹುದು.

ಇದೀಗ ಎಕ್ಸ್ ಬಳಕೆದಾರ ಸಿದ್ಧಾರ್ಥ್ ಶುಕ್ಲಾ ಎಂಬವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಭಾರತೀಯ ಪ್ರವಾಸಿಯೊಬ್ಬರು ಉದ್ಯಾನವನದಲ್ಲಿ ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಜೊತೆಗಾರರು ಹುಲಿಯ ಜೊತೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಮಾಡುತ್ತಿದ್ದಾರೆ. ಸಮೀಪದಲ್ಲೇ ಹುಲಿಯ ತರಬೇತುದಾರನೂ ನಡೆದುಕೊಂಡು ಹೋಗುತ್ತಿದ್ದ.

ಈ ಮಧ್ಯೆ ಹುಲಿಯ ಜೊತೆಗೆ ಕುಳಿತುಕೊಂಡು ಫೋಟೋ ತೆಗೆದುಕೊಳ್ಳಲು ಪ್ರವಾಸಿಗ ಮುಂದಾಗಿದ್ದಾನೆ. ಈ ವೇಳೆ ಏಕಾಏಕಿ ಕೋಪಗೊಂಡ ಹುಲಿ ಪ್ರವಾಸಿಗನ ಮೇಲೆ ದಾಳಿ ನಡೆಸಿದೆ. ಏಕಾಏಕಿ ಹುಲಿಯ ಆಕ್ರಮಣದಿಂದ ಜೊತೆಗಿದ್ದವರು ಬೆಚ್ಚಿಬಿದ್ದಿದ್ದಾರೆ.

ಇನ್ನೂ ಹುಲಿಯಿಂದ ಆಕ್ರಮಣಕ್ಕೊಳಗಾದ ಪ್ರವಾಸಿಗ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ಅದೇ ವಿಡಿಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ.  ವನ್ಯ ಜೀವಿ ಸುರಕ್ಷತೆ ಪ್ರೋಟೋ ಕಾಲ್, ಪ್ರಾಣಿ ಕಲ್ಯಾಣ ಮೊದಲಾದ ವಿಚಾರಗಳ ಬಗ್ಗೆ ಕಾಮೆಂಟ್ ಸೆಕ್ಷನ್ ನಲ್ಲಿ ಜನರು ಬರೆದುಕೊಂಡಿದ್ದಾರೆ. ಪ್ರಾಣಿಗಳಿಂದ ದಯೆ ನಿರೀಕ್ಷಿಸಬೇಡಿ, ಪ್ರಾಣಿಗಳು ಎಂದಿಗೂ ಪ್ರಾಣಿಗಳಾಗಿರುತ್ತವೆ. ರೋಮಾಂಚಕಾರಿ ಕ್ಷಣಗಳು ಕೆಲವೇ ನಿಮಿಷಗಳಲ್ಲಿ ದುರಂತವಾಗಿ ಪರಿಣಮಿಸಬಹುದು ಎಂದೂ ಎಚ್ಚರಿಸಿದ್ದಾರೆ.


 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version