ಗರ್ಬಾ ಕಾರ್ಯಕ್ರಮದಲ್ಲಿ ಹೆಂಡತಿಗೆ ಮುತ್ತಿಟ್ಟ ಪತಿ: ಸಂಪ್ರದಾಯವಾದಿಗಳ ವಿರೋಧಕ್ಕೆ ಹೆದರಿ ಕ್ಷಮೆಯಾಚಿಸಿದ ಜೋಡಿ

gujarath garba
29/09/2025

ಗುಜರಾತ್ ಗರ್ಬಾ ಕಾರ್ಯಕ್ರಮದಲ್ಲಿ ಮುತ್ತಿಟ್ಟು ರೀಲ್ಸ್ ಮಾಡಿದ ವಿಡಿಯೋ ವೈರಲ್ ಆದ ಬಳಿಕ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ಮೂಲದ ಜೋಡಿ ಕ್ಷಮೆಯಾಚಿಸಿದೆ.

ವಡೋದರಾದಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಚುಂಬಿಸುತ್ತಿರುವ ವಿಡಿಯೋ ವೈರಲ್ ಆದ ನಂತರ ಭಾರತೀಯ ಮೂಲದ ದಂಪತಿ ಕ್ಷಮೆಯಾಚಿಸಿದ್ದಾರೆ. ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನೆಲೆಸಿರುವ ಈ ದಂಪತಿಗಳು ತಮ್ಮ ಪೋಷಕರನ್ನು ಭೇಟಿ ಮಾಡಲು ಮತ್ತು ಗರ್ಬಾ ಆಚರಣೆಗಳಲ್ಲಿ ಭಾಗವಹಿಸಲು ವಡೋದರಾಕ್ಕೆ ಬಂದಿದ್ದರು. ಸೆಪ್ಟೆಂಬರ್ 26 ರಂದು ಗುಜರಾತ್‌ನ ವಡೋದರಾದ ಕಲಾಲಿ ಮೈದಾನದಲ್ಲಿ ನಡೆದ ಯುನೈಟೆಡ್ ವೇ ಗರ್ಬಾದ ಸಂದರ್ಭದಲ್ಲಿ ದಂಪತಿಗಳು ಹುರುಪಿನಿಂದ ನೃತ್ಯ ಮಾಡಿ ನಂತರ ಪತಿ ತನ್ನ ಪತ್ನಿಯನ್ನು ಎತ್ತಿ ತುಟಿಗಳಿಗೆ ಮುತ್ತಿಟ್ಟಿದ್ದು, ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ವಿಡಿಯೋಗೆ ಸಂಪ್ರದಾಯವಾದಿ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದಂಪತಿ ಪೊಲೀಸರಿಗೆ ಲಿಖಿತ ಕ್ಷಮೆಯಾಚನೆ ಮಾಡಿದ ನಂತರ ಮತ್ತೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಗೆ ಪ್ರಯಾಣಿಸಿದ್ದಾರೆ.  ಪತಿ ತನ್ನ ಪತ್ನಿಗೆ ಗರ್ಬಾ ಕಾರ್ಯಕ್ರಮದಲ್ಲಿ ಮುಟ್ಟಿಟ್ಟಿದ್ದಕ್ಕೆ ಇದು ಅಗೌರ್ವ, ಇದು ಪವಿತ್ರ ಸ್ಥಳ, ನೈಟ್ ಕ್ಲಬ್ ಅಲ್ಲ, ಗಾರ್ಬಾದಲ್ಲಿ ಅಶ್ಲೀಲ ಕೃತ್ಯ ಸ್ವೀಕಾರವಲ್ಲ ಎಂಬಿತ್ಯಾದಿ ಕಾಮೆಂಟ್ ಗಳು ಬಂದಿದ್ದವು.

ಇನ್ನು ಕೆಲವರು ಇದರಲ್ಲಿ ಎಲ್ಲಿದೆ ಅಶ್ಲೀಲ, ಪತಿ ತನ್ನ ಪತ್ನಿಗೆ ಪ್ರೀತಿಯಿಂದ ಮುತ್ತಿಡುವುದಕ್ಕೂ ದೇಶದಲ್ಲಿ ಅವಕಾಶವಿಲ್ಲವೇ? ದಂಪತಿ ಯಾವುದೇ ಅಶ್ಲೀಲತೆಯ ಪ್ರದರ್ಶನ ಮಾಡಿಲ್ಲವಾದರೂ, ಇಷ್ಟೊಂದು ವಿರೋಧಗಳೇಕೆ ಎನ್ನುವ ಪ್ರಶ್ನೆಗಳನ್ನು ಕೇಳಿದ್ದರು.  ಕೆಲವರು  ಈ ವಿಚಾರದ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರುವಷ್ಟೂ ದ್ವೇಷ ಸಾಧಿಸಿದ ಬೆನ್ನಲ್ಲೇ ದಂಪತಿ ಪೊಲೀಸ್ ಠಾಣೆಗೆ ತೆರಳಿ ಕ್ಷಮೆಯಾಚಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version