ಅಮೆರಿಕದಲ್ಲಿ ಕಾರು ಅಪಘಾತಕ್ಕೆ ಭಾರತ ಮೂಲದ ಒಂದೇ ಕುಟುಂಬದ ಮೂವರು ಬಲಿ!

ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕಳೆದ ಬುಧವಾರ ಬೆಳಗ್ಗೆ 5:45ಕ್ಕೆ ಲಾಂಪಾಸ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಮೃತರು ಒಂದೇ ಕುಟುಂಬದವರಾಗಿದ್ದು, ಅರವಿಂದ್ ಮಣಿ (45), ಅವರ ಪತ್ನಿ ಪ್ರದೀಪಾ ಅರವಿಂದ್ (40) ಮತ್ತು ಮಗಳು ಆಂಡ್ರಿಲ್ ಅರವಿಂದ್ (17) ಮೃತಪಟ್ಟವರು ಎಂದು ತಿಳಿದು ಬಂದಿದೆ. ಈ ಕುಟುಂಬದಲ್ಲಿ ಆದಿರ್ಯಾನ್ ಎಂಬಾತ ಮಾತ್ರವೇ ಬದುಕುಳಿದಿದ್ದು, ತನ್ನ ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದಾನೆ.
ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. 17 ವರ್ಷದ ಆಂಡ್ರಿಲ್, ಪ್ರೌಢಶಾಲೆ ಮುಗಿಸಿದ್ದು, ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕೆ ಪಡೆಯಲು ಪಾಲಕರೊಂದಿಗೆ ಹೋಗುತ್ತಿದ್ದಳು. ಆಕೆ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ಮುಂದಾಗಿದ್ದಳು. ಆದರೆ ಇದೀಗ ಇಡೀ ಕುಟುಂಬವೇ ಅಪಘಾತಕ್ಕೆ ಬಲಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97