ಟಿಡಿಪಿಯ ಮುಸ್ಲಿಂ ತುಷ್ಟೀಕರಣ ರಾಜಕಾರಣದ ಬಗ್ಗೆ ಮಾತಾಡಲು ಈಗ ಬಿಜೆಪಿಯವರಿಗೆ ಬಾಯಿ ಬರುತ್ತಿಲ್ಲವೇ..? ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

ತೆಲುಗು ದೇಶಂ ಪಕ್ಷದ ಮುಸ್ಲಿಂ ತುಷ್ಟೀಕರಣ ರಾಜಕಾರಣದ ಬಗ್ಗೆ ಮಾತಾಡಲು ಈಗ ಬಿಜೆಪಿಯವರಿಗೆ ಬಾಯಿ ಬರುತ್ತಿಲ್ಲವೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ ಪೈಕಿ ಮುಸ್ಲಿಮರಿಗೆ ನೀಡಿರುವ ಶೇಕಡ ನಾಲ್ಕರಷ್ಟು ಮೀಸಲಾತಿಯನ್ನು ಮುಂದುವರಿಸಲು ತೆಲುಗು ದೇಶಂ ಪಕ್ಷ ಬದ್ಧವಾಗಿದೆ ಎಂಬ ಟಿಡಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನರ ಲೋಕೇಶ್ ಅವರ ಹೇಳಿಕೆ ಬಗ್ಗೆ ಸಚಿವರು ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ತುಷ್ಟಿಕರಣ ಮಾಡುತ್ತದೆ ಎಂದು ಬಿಜೆಪಿಯವರು ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಎನ್.ಡಿ.ಎಯ ಅತಿ ದೊಡ್ಡ ಮಿತ್ರ ಪಕ್ಷ ಟಿಡಿಪಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ನಾಲ್ಕು ಶೇಕಡಾ ಮೀಸಲಾತಿಯನ್ನು ಮುಸ್ಲಿಮರಿಗೆ ಮುಂದುವರಿಸುವುದಾಗಿ ಹೇಳಿದೆ. ಈಗ್ಯಾಕೆ ಬಿಜೆಪಿಯವರು ಟಿಡಿಪಿಯದು ಮುಸ್ಲಿಂ ತುಷ್ಟಿ ಕರಣ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಕಡು ಕಷ್ಟದಲ್ಲಿರುವ ಮುಸ್ಲಿಂ ಕುಟುಂಬಕ್ಕೆ ಬಿಜೆಪಿ ಮಿತ್ರ ಪಕ್ಷಗಳು ಸೌಲಭ್ಯ ಒದಗಿಸಿದರೆ ಅದು ಕಲ್ಯಾಣ ಕಾರ್ಯಕ್ರಮ. ಇದೇ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಅದು ಮುಸ್ಲಿಂ ತುಷ್ಟಿಕರಣ. ಈಗಲಾದರೂ ಬಿಜೆಪಿಯವರಿಗೆ ಜ್ಞಾನೋದಯವಾಗಿ ಎಲ್ಲಾ ಧರ್ಮದವರನ್ನು ಪ್ರೀತಿಸಿ ಮೂಲಭೂತವಾದವನ್ನು ತ್ಯಜಿಸಲಿ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth