ಮಸ್ಜಿದುಲ್ ಅಕ್ಸದಲ್ಲಿ ಯೆಹೂದಿ ಮಂದಿರವನ್ನು ನಿರ್ಮಿಸಬೇಕು ಎಂದ ಇಸ್ರೇಲ್ ರಕ್ಷಣಾ ಸಚಿವ: ವ್ಯಾಪಕ ವಿರೋಧ

ಫೆಲೆಸ್ತೀನ್ ನ ಮಸ್ಜಿದುಲ್ ಅಕ್ಸದಲ್ಲಿ ಯೆಹೂದಿ ಮಂದಿರವನ್ನು ನಿರ್ಮಿಸಬೇಕು ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇತ್ ಮಾರ್ ಬೆನ್ ಗಿವರ್ ಅವರು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸೌದಿ ಅರೇಬಿಯಾ ಈ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿದೆ. ಇಸ್ರೇಲ್ ರಕ್ಷಣಾ ಸಚಿವರ ಈ ಹೇಳಿಕೆ ಪ್ರಚೋದನಕಾರಿ ಮತ್ತು ಅತ್ಯಂತ ಉಗ್ರವಾದಿ ಸ್ವರೂಪದ್ದಾಗಿದೆ..
ಈ ಹೇಳಿಕೆಯು ವಲಯದ ಸುರಕ್ಷಿತ ಗೆ ಅಪಾಯಕಾರಿಯಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಬೆನ್ ಗಿವ್ ಯರ್ ಅವರು ಸಂದರ್ಶನದ ನಡುವೆ ಈ ಮಾತು ಹೇಳಿದ್ದರು. ಇದಕ್ಕೆ ಕಟು ಭಾಷೆಯಲ್ಲಿ ಉತ್ತರ ನೀಡಿರುವ ಸೌದಿ ಅರೇಬಿಯಾ ಅಲ್ ಅಕ್ಸ ಮಸೀದಿಯ ಇತಿಹಾಸ ಮತ್ತು ಹಿನ್ನೆಲೆಯನ್ನು ಗೊತ್ತಿಲ್ಲದೆ ಮಾತಾಡುವುದು ಅಪಾಯಕಾರಿ ಎಂದು ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth