10:33 AM Saturday 23 - August 2025

ಸಚಿವರ ಮಕ್ಕಳೇ ಕ್ರಿಶ್ಚಿಯನ್ ಸ್ಕೂಲ್ ನಲ್ಲಿ ಕಲಿತಿದ್ದಾರೆ, ಅಲ್ಲಿ ಮತಾಂತರಕ್ಕೆ ಬಲವಂತ ಮಾಡಿದ್ರಾ? | ಡಿ.ಕೆ.ಶಿವಕುಮಾರ್ ಪ್ರಶ್ನೆ

d k shivakumar
21/12/2021

ಬೆಂಗಳೂರು: ನಾವು ಮತಾಂತರ ಕಾಯ್ದೆಗೆ ವಿರೋಧವಿದ್ದೇವೆ. ಕಾಯ್ದೆಯನ್ನು ಸಂಪೂರ್ಣ ವಿರೋಧಿಸುತ್ತೇವೆ. ಜನರ ದಿಕ್ಕು ತಪ್ಪಿಸಲು ಈ ಕಾಯ್ದೆ ತರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಮತಾಂತರ ಕಾಯ್ದೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ರಾಜ್ಯದಲ್ಲಿ 2.1 ಪರ್ಸೆಂಟ್​ ಕ್ರಿಶ್ಚಿಯನ್ಸ್ ಇದ್ದಾರೆ. ಮತಾಂತರ ಆಗಿದ್ದರೆ ಹೆಚ್ಚಾಗಬೇಕಿತ್ತಲ್ಲ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿದ್ದಾರೆ.

ಸಚಿವರ ಮಕ್ಕಳು ಕ್ರಿಶ್ಚಿಯನ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ಏನಾದ್ರೂ ಮತಾಂತರಕ್ಕೆ ಬಲವಂತ ಮಾಡ್ತಿದ್ದಾರಾ? ಇವರು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಿಲ್ಲ. ಇಂತಹ ವಿವಾದಾತ್ಮಕ ವಿಚಾರಗಳನ್ನ ತರುತ್ತಿದ್ದಾರೆ ಎಂದು ಕಿಡಿಕಾರಿದರು.

ಪಟಾಕಿ ರವಿಗೂ, ನನಗೂ ಸಂಬಂಧವಿಲ್ಲ. ಆದರೂ ‌ನನ್ನ ಬಗ್ಗೆ ಮಾತನಾಡುತ್ತಾರೆ. ಸಿಟಿ ರವಿ ಅಲ್ಲ, ಪಟಾಕಿ ರವಿ. ಪಟಾಕಿ ಹೊಡೆಯೋದು, ಬಿಟ್ಟು ಬಿಡುವುದು ಎಂದು ಅವರು ಕುಟುಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸರ್ಕಾರಿ ಕಚೇರಿಯಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ: ಆರ್​ ಟಿಐ ಕಾರ್ಯಕರ್ತನ ಬಂಧನ

ಕಿರಣಿ ಅಂಗಡಿಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳ ಬಂಧನ

ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ

ಕನ್ನಡ ಬಾವುಟ ಸುಟ್ಟು, ಬಸವಣ್ಣನ ಚಿತ್ರ ಅಪವಿತ್ರಗೊಳಿಸಿದ ಮೂವರು ಆರೋಪಿಗಳ ಬಂಧನ

ಮೊದಲ ಬಲಿ ಪಡೆದುಕೊಂಡ ಒಮಿಕ್ರಾನ್: 50 ವರ್ಷದ ವ್ಯಕ್ತಿ ಸಾವು

ರಶ್ಮಿಕಾ ಮಂದಣ್ಣ ಜೊತೆಗೆ ತೆರೆ ಹಂಚಿಕೊಳ್ಳುತ್ತಾರಾ ಡಾಲಿ ಧನಂಜಯ್?

ಇತ್ತೀಚಿನ ಸುದ್ದಿ

Exit mobile version