6:11 PM Thursday 16 - October 2025

ಜಾತ್ರೆ ವೇಳೆ ಉರುಳಿ ಬಿದ್ದ ರಥ: ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸಾವು

tamilnadu
14/06/2022

ಚೆನ್ನೈ: ತಮಿಳುನಾಡಿನ ಪಪ್ಪರಪಟ್ಟಿಯಲ್ಲಿರುವ ಪ್ರಸಿದ್ಧ ದೇವಸ್ಥಾನದ ಬೃಹತ್ ರಥ ಸೋಮವಾರ ಜಾತ್ರೆಯ ವೇಳೆ ಮಗುಚಿ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಧರ್ಮಪುರಿ ಜಿಲ್ಲೆಯ 50 ವರ್ಷ ವಯಸ್ಸಿನ ಜಿ.ಸರವಣನ್, 57 ವರ್ಷ ವಯಸ್ಸಿನ  ಸಿ.ಮನೋಹರನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.

ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ ಅಲಂಕೃತ ರಥವನ್ನು ಪೂಜಾ ಸ್ಥಳದ ಬಳಿಯ ಪ್ರಮುಖ ಬೀದಿಗಳಲ್ಲಿ ಎಳೆಯುತ್ತಿದ್ದ ವೇಳೆ ಚಲಿಸುತ್ತಿದ್ದ ರಥ ಏಕಾಏಕಿ ನೆರಕ್ಕುರುಳಿದ್ದು, ಪರಿಣಾಮವಾಗಿ ಇಬ್ಬರು ಭಕ್ತರು ರಥದ ಚಕ್ರದಡಿಯಲ್ಲಿ ಸಿಲುಕಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ಭಕ್ತರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

6 ಗಂಟೆಗಳಲ್ಲಿ 24 ಮೊಟ್ಟೆ ಇಟ್ಟ ಕೋಳಿ: ಅಚ್ಚರಿಗೀಡಾದ ಜನ

ತಂಗಿಯ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಅಣ್ಣ!

ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಯುವತಿ ಮೇಲೆ ಇಂಕ್ ದಾಳಿ

ಬಸ್, ಟೆಂಪೋ ಟ್ರಾವೆಲ್ ಮೇಲೆ ಉರುಳಿ ಬಿದ್ದ ಬೃಹತ್ ಮರ!

ಜಿಮ್ ನಲ್ಲಿ ವರ್ಕೌಟ್ ವೇಳೆ ಕುಸಿದು ಬಿದ್ದು ಯುವಕ ಸಾವು!

ಇತ್ತೀಚಿನ ಸುದ್ದಿ

Exit mobile version