ಭೀಕರ ಸ್ವರೂಪ ಪಡೆದುಕೊಂಡು ಅಬ್ಬರಿಸುತ್ತಿರುವ ಕಲ್ಲತ್ತಿಗರಿ ಜಲಪಾತ!

ಚಿಕ್ಕಮಗಳೂರು: ಕಾಫಿನಾಡ ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಾಮಳೆಗೆ ಕಲ್ಲತ್ತಿಗರಿ ಜಲಪಾತ ಭೀಕರ ಸ್ವರೂಪ ಪಡೆದುಕೊಂಡಿದ್ದು, ಯಾವಾಗಲೂ ಕಣ್ಣಿಗೆ ಖುಷಿ ನೀಡುತ್ತಿದ್ದ ಜಲಪಾತ ಇದೀಗ ಭೀತಿ ಸೃಷ್ಟಿರುವ ರೀತಿಯಲ್ಲಿ ಅಬ್ಬರಿಸುತ್ತಿದೆ.
ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿ ಈ ಫಾಲ್ಸ್ ಇದೆ. ತರೀಕೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಕಲ್ಲತ್ತಿಗರಿ ಜಲಪಾತ ಮೈದುಂಬಿ ಧುಮ್ಮಿಕ್ಕಿ ಹರಿಯುತ್ತಿದೆ.
ಕಳೆದ ವಾರ ನೀರಿನ ಪ್ರಮಾಣ ಸಾಧಾರಣವಾಗಿದ್ದ ಜಲಪಾತದಲ್ಲಿ ನಾಲ್ಕೈದು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನಾಲ್ಕೈದು ದಿನದ ಮಳೆಗೆ ಇದೀಗ ಅಬ್ಬರಿಸಿಕೊಂಡು ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ಕುತ್ತಿದೆ.
ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆಯಾಗುತ್ತಿದೆ ಹೀಗಾಗಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಪಾತ ನೋಡಲು ಪ್ರವಾಸಿಗರ ದಂಡು ತೆರಳುತ್ತಿದೆ. ಆದ್ರೆ, ಜಲಪಾತದ ಭೀಕರ ಅಬ್ಬರ ಕೇಳಿ ಅದರ ಬಳಿ ನಿಲ್ಲೋದಕ್ಕೆ ಭಯಪಡುತ್ತಿರುವುದು ಕಂಡು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97