6:23 AM Wednesday 15 - October 2025

ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?

kaluve
25/08/2021

ಮಂಡ್ಯ:  ದೇವಸ್ಥಾನಕ್ಕೆ ಹರಕೆ ತೀರಿಸಲು ಹೋಗಿದ್ದ ಎಂಟು ಮಂದಿಯ ಪೈಕಿ ಮೂವರು ಸ್ನೇಹಿತರು ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು,  ಪೂಜೆಯ ಬಳಿಕ ಊಟ ಮಾಡಿ ಕಾಲುವೆಯಲ್ಲಿ ಈಜಲು ತೆರಳಿದ್ದು, ಈ ವೇಳೆ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.

ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷ ವಯಸ್ಸಿನ ರವಿ ಹಾಗೂ ಗಾರೆ ಕೆಲಸಗಾರರಾಗಿದ್ದ ಕುಂಬಾರಕೊಪ್ಪಲು ನಗರದ 24 ವರ್ಷ ವಯಸ್ಸಿನ ಯೋಗೇಶ್ ಮತ್ತು ಲೋಕನಾಯಕನಗರದ ಮಂಜು ಮೃತಪಟ್ಟವರು ಎಂದು ತಿಳಿದು ಬಂದಿದೆ.

ಮೈಸೂರಿನಿಂದ ಎಂಟು ಯುವಕರ ತಂಡ ಚಂಡಗೋಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಹರಕೆಯ ಬಳಿಕ ಊಟ ಮುಗಿಸಿದ್ದಾಗಲೇ ಕಾಲುವೆಯಲ್ಲಿ  ಈಜುವ ಕೆಟ್ಟ ಆಲೋಚನೆ ಬಂದಿದ್ದು, ಅಪಾಯದ ಅರಿವಿಲ್ಲದೇ ನೀರಿಗೆ ಇಳಿದಿದ್ದಾರೆ.

ಈ ವೇಳೆ ರವಿ ನೀರಿನಲ್ಲಿ ಈಜಲು ಸಾಧ್ಯವಾಗದೇ ಮುಳುಗುತ್ತಿದ್ದು, ಇದರನ್ನು ಕಂಡು ಯೋಗೇಶ್ ಹಾಗೂ ಮಂಜು ತೆರಳಿದ್ದು, ಈ ವೇಳೆ ಇವರಿಬ್ಬರು ಕೂಡ ಮುಳುಗಿದ್ದಾರೆ. ಈ ವೇಳೆ ಸೀನು ಎಂಬಾತ ನೀರಿಗೆ ಇಳಿಯಲು ಪ್ರಯತ್ನಿಸಿದ್ದಾನೆ. ಆದರೆ, ಕಣ್ಣೆದುರು ಇಬ್ಬರು ಮುಳುಗಿರುವುದನ್ನು ಕಂಡು ಇತರ ಸ್ನೇಹಿತರು ಆತನನ್ನು ನೀರಿಗೆ ಇಳಿಯಲು ಬಿಟ್ಟಿಲ್ಲ ಎನ್ನಲಾಗಿದೆ.

ಇನ್ನೂ ಸ್ಥಳೀಯರು ಕೂಡ ನೀರಿಗೆ ಬಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ, ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಇಂದು ಬೆಳಗ್ಗೆ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.

ಇನ್ನಷ್ಟು ಸುದ್ದಿಗಳು…

ಸಂಸದನ ಮನೆಗೆ ಸೋಡಾ ಬಾಟ್ಲಿಯಿಂದ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳು

ನಟಿಯರು ಡ್ರಗ್ಸ್ ಸೇವಿಸಿದ್ದು ದೃಡವಾಗಿದೆ, ಕೇಸ್ ಇನ್ನಷ್ಟು ಗಟ್ಟಿಯಾಗಿದೆ | ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?

ಮಹಿಳೆಯರು ಮನೆಯಲ್ಲಿಯೇ ಇರಿ, ಇಲ್ಲವಾದರೆ ಉಗ್ರರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು | ತಾಲಿಬಾನ್ ನಾಯಕ

ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಇತ್ತೀಚಿನ ಸುದ್ದಿ

Exit mobile version