ಸಂಸದೆ ಕನಿಮೊಳಿಗೆ ಬಸ್ ಟಿಕೆಟ್ ವಿಚಾರದಲ್ಲಿ ಕೆಲಸ ಕಳೆದುಕೊಂಡ ಮೊದಲ ಮಹಿಳಾ ಬಸ್ ಚಾಲಕಿ: ಶರ್ಮಿಳಾಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಬಸ್ ಟಿಕೆಟ್ ನೀಡುವ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಎಂಬುವವರಿಗೆ ನಟ ಕಮಲ್ ಹಾಸನ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಾಲಕಿಯಾಗಿ ಶರ್ಮಿಳಾ ಉದ್ಯೋಗ ನಿರ್ವಹಿಸಿಕೊಂಡು ಹೋಗಲು ಸಹಾಯ ಮಾಡಲು ಕಮಲ್ ಅವರ ‘ಕಮಲ್ ಪೆಟ್ಟು ಮೈಯಮ್’ (ಕಮಲ್ ಕಲ್ಬರಲ್ ಸೆಂಟರ್) ವತಿಯಿಂದ ಕಾರು ನೀಡಲಾಗಿದೆ ಎಂದು ಸಂಘಟನೆ ಹೇಳಿದೆ.
ಕಮಲ್ ಹಾಸನ್ ರವರು ತಮ್ಮ ಚೆನ್ನೈ ಕಚೇರಿಗೆ ಆಹ್ವಾನಿಸಿ, ಹೊಸ ಕಾರು ಖರೀದಿಗೆ ಮತ್ತು ಉದ್ಯಮಿಯಾಗಿ ಅವರ ಪ್ರಯಾಣವನ್ನು ಮುಂದುವರಿಸಲು ಚೆಕ್ ಅನ್ನು ಹಸ್ತಾಂತರಿಸಿದರು. ಇದೇ ವೇಳೆ ಮಾತನಾಡಿದ ಹಾಸನ್, ‘ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳರನ್ನು ಸೃಷ್ಟಿಸಬೇಕು’ ಎಂದು ಈ ಸಂಸ್ಥೆ ಹೇಳಿದೆ.
ಬಸ್ ಓಡಿಸುತ್ತಿದ್ದ ಶರ್ಮಿಳಾ ಅವರು ಕನಿಮೊಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದ್ದರು. ಆದರೆ ಮಹಿಳಾ ಬಸ್ ಕಂಡಕ್ಟರ್ ಕನಿಮೊಳಿಗೆ ಹಣ ಪಡೆದು ಟಿಕೆಟ್ ನೀಡಿದ್ದರು. ಹೀಗಾಗಿ ಶರ್ಮಿಳಾ ಮಹಿಳಾ ಕಂಡಕ್ಟರ್ ಜೊತೆಗೆ ವಾಗ್ವಾದಕ್ಕಿಳಿದಿದ್ದರು. ಈ ಕಾರಣದಿಂದ ಶರ್ಮಿಳಾರನ್ನು ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದರು. ಶರ್ಮಿಳಾ ಅವರನ್ನು ವಜಾಗೊಳಿಸಿರುವ ಕುರಿತು ತಿಳಿದ ಬಳಿಕ ಆಕೆಗೆ ದೂರವಾಣಿ ಕರೆ ಮಾಡಿದ ಕನಿಮೋಳಿ, ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ, ವೃತ್ತಿ ಜೀವನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ಕನಿಮೊಳಿ ಅವರನ್ನು ಸತ್ಕರಿಸಿ ಬಸ್ಸಿನಲ್ಲಿ ಉಚಿತವಾಗಿ ಕರೆದೊಯ್ದ ಸ್ವಲ್ಪ ಸಮಯದ ನಂತರ ಶರ್ಮಿಳಾರನ್ನು ಖಾಸಗಿ ಸಾರಿಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw