ವಿವಾದಿತ ಕೇರಳ ಸ್ಟೋರಿ ತಂಡದಿಂದ ‘ಬಸ್ತರ್’ ಎಂಬ ಹೊಸ ಸಿನಿಮಾ ಘೋಷಣೆ: ಇದರಲ್ಲಿದೆ 76 ಯೋಧರ ಬಲಿ ಕಥೆ..!

ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಗುರುತಿಸಿಕೊಂಡ ವಿವಾದಾತ್ಮಕ ‘ಕೇರಳ ಸ್ಟೋರಿ’ ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್ ಅವರು 2024ರ ಎಪ್ರಿಲ್ 5ಕ್ಕೆ ಮತ್ತೊಂದು ಹೊಸ ಚಿತ್ರ ಬಿಡುಗಡೆಯ ಘೋಷಣೆ ಮಾಡಿದ್ದಾರೆ.
2010ರಲ್ಲಿ ನಕ್ಸಲರು ಛತ್ತೀಸ್ ಗಢದ ಬಕರ್‌ನಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ಸಿಆರ್ ಪಿಎಫ್ ಯೋಧರು ಹತರಾಗಿದ್ದರು. ಈ ದಾಳಿಯ ಹಿನ್ನೆಲೆ ಮತ್ತು ಭೀಕರತೆಯ ಕಥೆಯನ್ನು ಈ ಹೊಸ ಚಿತ್ರ ಹೊಂದಿದೆ ಎನ್ನಲಾಗಿದೆ.
ಇನ್ನು ಈ ಹೊಸ ಚಿತ್ರಕ್ಕೆ ಬಸ್ತರ್ ಎಂದು ಹೆಸರಿಡಲಾಗಿದೆ. ಕೇರಳ ಸ್ಟೋರಿ ಚಿತ್ರವು ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅವರನ್ನು ಉಗ್ರರನ್ನಾಗಿ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಿದ ಕಥಾವಸ್ತುವನ್ನು ಹೊಂದಿತ್ತು. ಈ ಸಿನಿಮಾ ಬಹಳ ವಿರೋಧಕ್ಕೆ ಗುರಿಯಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw