10:29 AM Wednesday 20 - August 2025

ಕನ್ನಡ ಬಿಗ್ ಬಾಸ್ ಸ್ಪರ್ಧಿಯ ಮನೆಗೆ ಪೊಲೀಸ್ ದಾಳಿ | ಕಾರಣ ಏನು ಗೊತ್ತಾ?

05/03/2021

ಬೆಂಗಳೂರು: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನ ಸೀಸನ್ 4ರಲ್ಲಿ  ವೈಲ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ಮಸ್ತಾನ್ ಚಂದ್ರನನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡ್ರಗ್ ಪೆಡ್ಲರ್​ಗಳೊಂದಿಗೆ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಗೋವಿಂದಪುರ ಠಾಣೆ ಪೊಲೀಸರು ಮಸ್ತಾನ್ ಚಂದ್ರರ ವಿಚಾರಣೆ ನಡೆಸುತ್ತಿದ್ದಾರೆ. ಬಾಳಸವಾಡಿ ಉಪವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಇಂದು ಬೆಳಗ್ಗೆ ಆರು ಗಂಟೆಗೆ ಸಂಜಯ್ ನಗರದಲ್ಲಿರುವ ಮಸ್ತಾನ್ ಚಂದ್ರ ಅವರ ಮನೆ ಮೇಲೆ ರೇಡ್ ಮಾಡಿದ್ದಾರೆ.

ನೈಜೀರಿಯನ್ ಡ್ರಗ್ ಪೆಡ್ಲರ್​ಗಳ ಜೊತೆ ಮಸ್ತಾನ್ ನಂಟು: ನೈಜೀರಿಯಾದಿಂದ ಸ್ಟೂಡೆಂಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಯುಗೋಚುಕ್ವು ವಿಕ್ಟರ್ (34) ಎಂಬ ವ್ಯಕ್ತಿ ಎಂಡಿಎಂಎ ಡ್ರಗ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದ. ಬಂಧಿತನಿಂದ 40 ಲಕ್ಷ ಮೌಲ್ಯದ 500 ಗ್ರಾಮ್ ತೂಕದ ಡ್ರಗ್ ಪಿಲ್ಸ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ಮಸ್ತಾನ್ ಚಂದ್ರನಿಗೂ ಡ್ರಗ್ ಸಪ್ಲೈ ಮಾಡಿರುವುದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

Exit mobile version