5:27 PM Saturday 31 - January 2026

ಮರಾಠಿ ಮಾತನಾಡು ಎಂದು ಕನ್ನಡಿಗ ಲಾರಿ ಚಾಲಕನ ಬಟ್ಟೆ ಬಿಚ್ಚಿ ಹಲ್ಲೆ!

06/02/2021

ಬೆಳಗಾವಿ; ಮರಾಠಿ ಮಾತನಾಡುವಂತೆ ಧಮ್ಕಿ ಹಾಕಿ ಕನ್ನಡಿಗ ಲಾರಿ ಚಾಲಕನಿಗೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಮಹಾರಾಷ್ಟ್ರದ ಸಾತಾರಾ ನಗರದ ಟೋಲ್ ಗೇಟ್ ಬಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.’

ಕರ್ನಾಟಕದ ಲಾರಿ ಚಾಲಕನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಲಾಗಿದೆ. ಶುಕ್ರವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ.  ಲಾರಿ ಚಾಲಕ ಗೋವಿಂದ್ ಎಂಬವರ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಲಾರಿ ಚಾಲಕ ಗೋವಿಂದ್ ಅವರು, ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿಗೆ ಕರೆ ವಿವರಿಸಿದ್ದಾರೆ. ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿಗೆ ಕರೆ ಮಾಡಿ ಲಾರಿ ಚಾಲಕ ತಮ್ಮ ಅಳಲು ತೋಡಿಕೊಂಡಿದ್ದು, ಈ ಘಟನೆ ಕುರಿತು ಅಶೋಕ್ ಚಂದರಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version