ಆಕ್ಟಿಂಗ್ ಟು ಪಾಲಿಟಿಕ್ಸ್: ಲೋಕ ಚುನಾವಣೆ ಮುನ್ನವೇ ಶಿವಸೇನೆ ಸೇರ್ತಾರಂತೆ ಕರೀನಾ ಕಪೂರ್, ಕರಿಷ್ಮಾ ಕಪೂರ್

28/03/2024

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಸೆಲೆಬ್ರೀಟಿಗಳು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ರಾಜಕೀಯ ಕ್ಷೇತ್ರ ರಂಗೇರುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಕಪೂರ್ ಕುಟುಂಬದ ಇಬ್ಬರು ಪ್ರಮುಖ ನಟಿಯರಾದ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಖಾನ್ ಅವರು ಏಕನಾಥ್ ಶಿಂಧೆ ಅವರ ಶಿವಸೇನೆ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಲು ಯೋಚಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಇಂದು ಬಾಲಿವುಡ್ ನಟ ಗೋವಿಂದಾ ಕೂಡ ಶಿವಸೇನೆ ಪಕ್ಷಕ್ಕೆ ಸೇರಿದ್ದಾರೆ.

ಈ ವರದಿಗಳು ನಿಜವಾದ್ರೆ‌‌ ಮುಂದೆ ಕರಿಷ್ಮಾ ಕಪೂರ್, ಕರೀನಾ ಕಪೂರ್ ಚುನಾವಣೆಯಲ್ಲೂ ನಿಲ್ಲುವ ಸಾಧ್ಯತೆಗಳೂ ಇವೆ. ಗೋವಿಂದ ಅವರು ಈಗಾಗಲೇ ಕಾಂಗ್ರೆಸ್ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಮತ್ತು ಸಂಸದರೂ ಆಗಿದ್ದಾರೆ.

 

 

ಇತ್ತೀಚಿನ ಸುದ್ದಿ

Exit mobile version