ಶಾಕಿಂಗ್ ನ್ಯೂಸ್:  ನೇಣು ಬಿಗಿದು ಪ್ರಖ್ಯಾತ ಸ್ವಾಮೀಜಿ ಆತ್ಮಹತ್ಯೆ

25/11/2020

ಹಾಸನ: ಸ್ವಾಮೀಜಿ ಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.  ಸ್ವಾಮೀಜಿಯ ಆತ್ಮಹತ್ಯೆ ಇದೀಗ ವ್ಯಾಪಕ ಅನುಮಾನಗಳಿಗೆ ಕಾರಣವಾಗಿದೆ.

ಆಲೂರು ತಾಲೂಕಿನ ಬಾಳೆಹೊನ್ನೂರು ಶಾಖಾ ಮಠ, ಕಾರ್ಜುವಳ್ಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ(50) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ.

ಮಂಗಳವಾರ ರಾತ್ರಿ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ಸ್ವಾಮೀಜಿಯ ಕೋಣೆಯತ್ತ ವ್ಯಕ್ತಿಯೊಬ್ಬರ ತೆರಳಿದಾಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಘಿದೆ.

ಸ್ವಾಮೀಜಿಯ ಆತ್ಮಹತ್ಯೆಯ ಸುದ್ದಿ ಕೇಳಿ ಭಕ್ತರಿಗೆ ಆಘಾತವಾಗಿದ್ದು, ಸ್ವಾಮೀಜಿಯ ಆತ್ಮಹತ್ಯೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಆಲೂರು ಠಾಣಾ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version