9:13 AM Wednesday 15 - October 2025

ಬ್ರೇಕಿಂಗ್ ನ್ಯೂಸ್: ವೀಕೆಂಡ್ ಕರ್ಪ್ಯೂ ರದ್ದು: ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ

weekend curfew
21/01/2022

ಬೆಂಗಳೂರು: ಕೊವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ರದ್ದುಗೊಳಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದು, ಉಳಿದೆಲ್ಲ ನಿರ್ಬಂಧಗಳು ಹಾಗೆಯೇ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಶನಿವಾರ ಹಾಗೂ ಭಾನುವಾರದ ಕರ್ಫ್ಯೂ ರದ್ದುಗೊಳಿಸಲಾಗಿದ್ದು, ತಜ್ಞರ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಳವಾದರೆ, ಮತ್ತೆ ವೀಕೆಂಡ್ ಕರ್ಫ್ಯೂ ಹಾಕಬೇಕಾಗುತ್ತದೆ ಎಂದು ಅವರು ಹೇಳಿದರು.

ಪ್ರತಿಭಟನೆ, ರ್‍ಯಾಲಿ, ಜಾತ್ರೆ ಮೊದಲಾದವುಗಳಿಗೆ ಹಾಕಿರುವ ನಿರ್ಬಂಧಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.

ವೀಕೆಂಡ್ ಕರ್ಫ್ಯೂಗೆ ಸಂಬಂಧಿಸಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವೀಕೆಂಡ್ ಕರ್ಫ್ಯೂಗೆ ಸಲಹೆ ನೀಡಿದ ತಜ್ಞರ ಹೆಸರು ಹೇಳಿ ಎಂದು ಮಾಧ್ಯಮಗಳ ಡಿಬೇಟ್ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲಷ್ಕರ್‌-ಎ-ತೊಯ್ಬಾ ಉಗ್ರನ ಸೆರೆ

ಅಕ್ರಾ ಬಳಿ ಭಾರೀ ಸ್ಫೋಟ: 17 ಸಾವು, 59 ಮಂದಿಗೆ ಗಾಯ

ಮಹಿಳೆಯ ಕೊಲೆ ಪ್ರಕರಣ; ಬಿಜೆಪಿ ಕೌನ್ಸಿಲರ್ ಬಂಧನ

ಹಾಡಹಗಲೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ

Exit mobile version