2:06 AM Wednesday 15 - October 2025

ಕಚ್ಚಾ ತೈಲ ಬೆಲೆಯಲ್ಲಿ ಬಾರೀ ಇಳಿಕೆ

petrol
10/03/2022

ವಾಷಿಂಗ್‌ ಟನ್‌: ಯುಎಇ (ಸಂಯುಕ್ತ ಅರಬ್ ಒಕ್ಕೂಟ) ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಯು ಬಾರೀ ಇಳಿಕೆ ಕಂಡಿದೆ.

ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಸೋಮವಾರ 1 ಬ್ಯಾರಲ್‍ಗೆ 130 ಡಾಲರ್ (10,006 ರೂ.) ಆಗಿತ್ತು. ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು.

ತೈಲ ಕಾರ್ಟೆಲ್ ಒಪೆಕ್‍ನ ಸದಸ್ಯರಾದ ಯುಎಇ ಹೇಳಿಕೆಯನ್ನು ನೀಡಿದ ನಂತರ ಬ್ರೇಂಟ್ ಕಚ್ಚಾ ತೈಲ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಶೇ. 12ರಷ್ಟು ಇಳಿಕೆ ಕಂಡಿದ್ದು, ಸುಮಾರು 112 ಡಾಲರ್(8,549ರೂ.)ಗೆ ಇಳಿದಿದೆ.

ಇದರಿಂದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ನಾಯಕರು ಸಭೆ ನಡೆಸಿ, ಕಚ್ಚಾ ತೈಲ ಬೆಲೆಯ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಅರಬ್ ರಾಷ್ಟ್ರಗಳ ತೈಲ ಉತ್ಪಾದಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಯುಎಇ ರಾಯಭಾರಿ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿ, ನಾವು ತೈಲ ಉತ್ಪಾದನೆ ಮಟ್ಟವನ್ನು ಹೆಚ್ಚು ಮಾಡಲು ಒಲವು ತೋರಿಸಿದ್ದೇವೆ. ಉತ್ಪಾದನೆ ಮಟ್ಟವನ್ನು ಪರಿಗಣಿಸಲು ಒಪೆಕ್‍ನ್ನು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯುದ್ದ ಭೂಮಿಯಲ್ಲಿ ಉಕ್ರೇನಿಯನ್ ಸೈನಿಕನ ವಿಚಿತ್ರ ಪ್ರೇಮ ನಿವೇದನೆ

ಪಂಚರಾಜ್ಯ ಚುನಾವಣೆ: ರಾಜ್ಯದ ಮೇಲೆ ಪರಿಣಾಮ ಬೀರಲ್ಲ; ಸಚಿವ ವಿ.ಸೋಮಣ್ಣ

ಪಂಜಾಬ್ ಸಿಎಂ ಚರಣ್‌ ಜಿತ್ ಸಿಂಗ್ ರಾಜೀನಾಮೆ

ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

ಭೀಕರ ರಸ್ತೆ ಅಪಘಾತ: ಡಿಎಂಕೆ ರಾಜ್ಯಸಭಾ ಸದಸ್ಯನ ಪುತ್ರ ಸಾವು

 

ಇತ್ತೀಚಿನ ಸುದ್ದಿ

Exit mobile version