ಅರ್ಧ ಶತಕ ಪೂರೈಸಿದ ಕೆ.ಎಲ್.ರಾಹುಲ್: ವಿಕೆಟ್ ಒಪ್ಪಿಸಿದ ರವೀಂದ್ರ ಜಡೇಜಾ

19/11/2023
ಭಾರತ—ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ಜಿದ್ದಾಜಿದ್ದಿನ ಹೋರಾಟ ಆರಂಭವಾಗಿದೆ. ಅರ್ಧ ಶತಕ ಪೂರೈಸಿ, ವಿರಾಟ್ ಕೊಹ್ಲಿ ಅವರು ವಿಕೆಟ್ ಒಪ್ಪಿಸಿದ್ದ ಬೆನ್ನಲ್ಲೇ, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಆಟ ಮುಂದುವರಿಸಿದ್ದರು.
ಕೆ.ಎಲ್.ರಾಹುಲ್ ಅರ್ಧ ಶತಕ ಪೂರೈಸಿದ ಬೆನ್ನಲ್ಲೇ, ಜೋಶ್ ಹ್ಯಾಝಲ್ ವುಡ್ ಎಸೆದ 36ನೇ ಓವರ್ ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಷ್ ಗೆ ರವೀಂದ್ರ ಜಡೇಜಾ ಕ್ಯಾಚ್ ನೀಡುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
ರವೀಂದ್ರ ಜಡೇಜಾ ಬಳಿಕ ಇದೀಗ ಸೂರ್ಯ ಕುಮಾರ್ ಅಂಗಣಕ್ಕಿಳಿದಿದ್ದಾರೆ. ಕೆ.ಎಲ್.ರಾಹುಲ್ ಅವರು 94 ಎಸೆತಗಳಲ್ಲಿ 56 ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾ 5 ವಿಕೆಟ್ ಗಳ ನಷ್ಟಕ್ಕೆ 180 ರನ್ ಗಳಿಸಿದೆ.