4:01 AM Thursday 29 - January 2026

ಕುಂದಾಪುರ: ಕಾರಿನಲ್ಲಿ ಬಂದು ಯುವಕನಿಗೆ ಚೂರಿಯಿಂದ ಇರಿದು ಪರಾರಿ

police
02/10/2023

ಕುಂದಾಪುರ:  ಕಾರಿನಲ್ಲಿ ಬಂದು ಅಪರಿಚಿತನೊಬ್ಬ ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ರವಿವಾರ ಸಂಜೆ ಕುಂದಾಪುರದ ಚಿಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ‌  ನಡೆದಿದೆ.

ಕುಂದಾಪುರ ಮೂಲದ ರಾಘವೇಂದ್ರ ಶೇರೆಗಾರ್ (42)  ಚೂರಿ ಇರಿತಕ್ಕೊಳಗಾದವರು. ಗಂಭೀರ  ಗಾಯಗೊಂಡ  ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಘವೇಂದ್ರ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ  ರಾಘವೇಂದ್ರ ಕಾರನ್ನು ಅಡ್ಡಗಟ್ಟಿ,  ತೊಡೆಗೆ ಚೂರಿ ಇರಿದು, ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಬಗ್ಗೆ ಮಾಹಿತಿ ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.

ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ವೃತ್ತ ನಿರೀಕ್ಷಕ ನಂದ ಕುಮಾರ್, ಕುಂದಾಪುರ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version