2:00 AM Saturday 31 - January 2026

ಲಾಲು ಪ್ರಸಾದ್ ಯಾದವ್ ಗೆ ಕೊನೆಗೂ ಸಿಕ್ಕಿತು ಜಾಮೀನು!

laluprasad yadav
17/04/2021

ರಾಂಚಿಮೇವು ಹಗರಣಕ್ಕೆ ಸಂಬಂಧಿಸಿದ ಡುಮ್ಕಾ ಖಜಾನೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್‌ನ ಹೈಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ ಐ ವರದಿ ಮಾಡಿದೆ.

ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಶಿಕ್ಷೆಗೆ ಗುರಿಯಾಗಿದ್ದರು. ಮೂರರಲ್ಲಿ ಈಗಾಗಲೇ ಅವರು ಜಾಮೀನು ಪಡೆದಿದ್ದಾರೆ. ನಾಲ್ಕನೇ ಡುಮ್ಕಾ ಖಜಾನೆ ಪ್ರಕರಣದಲ್ಲೂ ಇದೀಗ ಲಾಲೂ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಅವರು ಜೈಲಿನಿಂದ ಹೊರಬರಲಿದ್ದಾರೆ.

ಡುಮ್ಕಾ ಖಜಾನೆಯಿಂದ ರೂ. 3.13 ಕೋಟಿ ಅಕ್ರಮವಾಗಿ ವಿಥ್ ಡ್ರಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಯಾದವ್ ಅವರಿಗೆ 7 ವರ್ಷ ಶಿಕ್ಷೆಯಾಗಿತ್ತು.

ಇತ್ತೀಚಿನ ಸುದ್ದಿ

Exit mobile version