ಗಡ್ಡ ಟ್ರಿಮ್ ಮಾಡಿ ರಾಹುಲ್ ಜೀ, ನಿಮಗೆ ಇನ್ನೂ ಸಮಯವಿದೆ. ದಯವಿಟ್ಟು ಮದುವೆಯಾಗಿ ಎಂದ ಲಾಲೂ ಪ್ರಸಾದ್..!

ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರಾಹುಲ್ ಗಾಂಧಿ ಅವರನ್ನು ಕಾಳೆಲೆಯುತ್ತ ಮದುವೆಯಾಗುವಂತೆ ಕೇಳಿಕೊಂಡರು.
‘ರಾಹುಲ್ ಜಿ ಅಭಿ ಭಿ ಸಮಯ್ ಜ್ಯಾದಾ ಬೀಟಾ ನಹೀ ಹೈ, ಆಪ್ ಶಾದಿ ಕರಿಯೆ’ (ರಾಹುಲ್ ಜೀ, ನಿಮಗೆ ಇನ್ನೂ ಸಮಯವಿದೆ, ದಯವಿಟ್ಟು ಮದುವೆಯಾಗಿ.) ಎಂದರು.
ಕಾಂಗ್ರೆಸ್ ನಾಯಕನ ಮದುವೆಯಲ್ಲಿ ‘ಬಾರಾಟಿ’ ಆಗಲು ಬಯಸುತ್ತೇನೆ ಎಂದು ಅವರು ತಮಾಷೆಯಾಗಿ ಹೇಳಿದರು. ‘ನೀವು ಬೇಗ ಮದುವೆಯಾಗಿ. ಇದರಿಂದ ನಿಮ್ಮ ವಿವಾಹ ಸಮಾರಂಭದಲ್ಲಿ ನಾವೆಲ್ಲರೂ ಭಾಗವಹಿಸಬಹುದು’ ಎಂದು ಲಾಲು ತಮಾಷೆ ಮಾಡುತ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, “ಆಪ್ನೆ ಕೆಹ್ ದಿಯಾ ತೋ ಹೋ ಜೇಗಿ (ನೀವು ಹಾಗೆ ಹೇಳಿದರೆ, ಅದು ಸಂಭವಿಸುತ್ತದೆ)” ಎಂದು ಹೇಳಿದರು.
ಇದೇ ವೇಳೆ ಲಾಲು ಯಾದವ್ ಅವರು ರಾಹುಲ್ ಗಾಂಧಿಗೆ ಗಡ್ಡ ಕತ್ತರಿಸಲು ಸಲಹೆ ನೀಡಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳ ಕಾರ್ಯತಂತ್ರವನ್ನು ರೂಪಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw