6:05 PM Wednesday 15 - October 2025

ಲಸಿಕೆ ಪಡೆದ ಮೂರು ತಿಂಗಳ ಮಗು ಸಾವು | ಮಕ್ಕಳ ಲಸಿಕೆ ಬದಲು ಕೊವಿಡ್ ಲಸಿಕೆ ಹಾಕಿದರೇ ಸಿಬ್ಬಂದಿ?

kolar
14/07/2021

ಕೋಲಾರ: ಮೂರು ತಿಂಗಳ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆರೋಗ್ಯ ಸಿಬ್ಬಂದಿ ಚುಚ್ಚು ಮದ್ದು ನೀಡಿದ ಬಳಿಕ ಮಗು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,  ಅಂಜಲಿ ಹಾಗೂ ನಾಗರಾಜ್  ದಂಪತಿಯ ಮೂರು ತಿಂಗಳ ಮಗು ಮೃತಪಟ್ಟ ಮಗುವಾಗಿದ್ದು, ಮಕ್ಕಳಿಗೆ ನೀಡುವ ಚುಚ್ಚು ಮದ್ದಿನ ಬದಲಿಗೆ ಆರೋಗ್ಯ ಸಿಬ್ಬಂದಿ ಕೊವಿಡ್ ವ್ಯಾಕ್ಸಿನ್ ಚುಚ್ಚಿದ್ದು, ಇದರ ಪರಿಣಾಮವಾಗಿ ಮಗು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ನಿನ್ನೆ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ನೀಡಲಾಗಿದ್ದು, ಇದರ ಜೊತೆಗೆ ಮೂರು ಮಕ್ಕಳಿಗೆ ಮಕ್ಕಳಿಗೆ ನೀಡಲಾಗುವ ಲಸಿಕೆಯನ್ನು ನೀಡಲಾಗಿತ್ತು. ಆದರೆ ಲಸಿಕೆ ಹಾಕುವ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದು, ಮಕ್ಕಳ ಲಸಿಕೆಗೆ ಬದಲಾಗಿ ಕೊವಿಡ್ ವ್ಯಾಕ್ಸಿನ್ ಚುಚ್ಚಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಪ್ರತಿಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಆಗಮಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು:

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ 1 ವರ್ಷದ ಮಗು ದಾರುಣ ಸಾವು

ಐಸ್ ಕ್ರೀಂನಲ್ಲಿ ಇಲಿಯ ವಿಷ ಬೆರೆಸಿ ಮಕ್ಕಳಿಗೆ ನೀಡಿದ ತಂದೆ | 5 ವರ್ಷದ ಮಗು ಸಾವು, ಇನ್ನಿಬ್ಬರು ಗಂಭೀರ

ಅಂಗಳದಲ್ಲಿ ಆಟವಾಡುತ್ತಾ ಊಟ ಮಾಡುತ್ತಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನ ಕಾಯಿ | ಮಗು ಸಾವು

ನದಿಯಲ್ಲಿ ಮುಳುಗಿದ 2 ದೋಣಿಗಳು ಮಗು ಸಾವು, 7 ಮಂದಿ ನಾಪತ್ತೆ

ಟಿವಿ ಮೈಮೇಲೆ ಬಿದ್ದು 2 ವರ್ಷದ ಮಗು ಸಾವು

ಚುಚ್ಚು ಮದ್ದು ಪಡೆದ ಬಳಿಕ ನಾಲ್ಕೂವರೆ ವರ್ಷದ ಮಗು ದಾರುಣ ಸಾವು | ಶುಶ್ರೂಷಕಿಯರ ನಿರ್ಲಕ್ಷ್ಯದ ಆರೋಪ!

ಇತ್ತೀಚಿನ ಸುದ್ದಿ

Exit mobile version