ಶಿವರಾತ್ರಿಯಂದೇ ಹೃದಯಾಘಾತದಿಂದ ಧರ್ಮಸ್ಥಳದ ಸಾಕಾನೆ ಲತಾ ನಿಧನ

08/03/2024
ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಸಾಕಾನೆ ಇಂದು ನಿಧನ ಹೊಂದಿದೆ.
60 ವರ್ಷ ವಯಸ್ಸಿನ ಲತಾ ಆನೆ ಶುಕ್ರವಾರ ಹೃದಯಾಘಾತದಿಂದ ನಿಧನವಾಗಿದ್ದು, ಶಿವರಾತ್ರಿಯ ದಿನವೇ ಶಿವೈಕ್ಯಳಾಗಿದ್ದಾಳೆ ಎಂದು ಭಕ್ತರು ಭಾವುಕರಾಗಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ಮಂಜುನಾಥನ ರಥೋತ್ಸವ, ಲಕ್ಷದೀಪೋತ್ಸವ, ಶಿವರಾತ್ರಿ ಉತ್ಸವಗಳಲ್ಲಿ ಲತಾ ಮುಂಚೂಣಿಯಲ್ಲಿದ್ದಳು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಇಂದು ಸಾಕಾನೆ ಲತಾಳ ಅಂತ್ಯ ಸಂಸ್ಕಾರ ನಡೆಯಲಿದ್ದು, ಈಗಾಗಲೇ ಸಿದ್ಧತೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth