ಬೋನಿಗೆ ಬಿದ್ದ ಚಿರತೆ: ಬೋನಿನ ಬಾಗಿಲನ್ನ ಅರ್ಧ ತೆಗೆದು ಅಧಿಕಾರಿಗಳಿಂದ ಹುಚ್ಚಾಟ!

ಚಿಕ್ಕಮಗಳೂರು: ಬೋನಿನಲ್ಲಿ ಸೆರೆಯಾದ ಚಿರತೆ ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲು ಅರ್ಧ ತೆಗೆದು ಚಿರತೆಯನ್ನ ಅಗ್ರೆಸ್ಸೀವ್ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾರಾಯಣಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ–ಭಯ ಹುಟ್ಟಿಸಿತ್ತು. ಸ್ಥಳಿಯರು ಹೊಲ—ಹದ್ದೆ–ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು.
ಮಕ್ಕಳು ಕೂಡ ಶಾಲೆಗೆ ಹೋಗಲು ಭಯಪಡುತ್ತಿದ್ದರು. ಹಾಗಾಗಿ ಅರಣ್ಯ ಇಲಾಖೆಯವರು ನಾರಾಯಣಪುರ ಗ್ರಾಮದ ಶಿವಯ್ಯ ಎಂಬುವರ ಮನೆ ಬಳಿ ಬೋನಿಟ್ಟಿದ್ದರು. ಕಳೆದ ರಾತ್ರಿ 12 ಗಂಟೆ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತ್ತು. ಆದರೆ, ಇಂದು ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಯಾಗಿದ್ದ ಬೋನಿನ ಬಾಗಿಲನ್ನ ಅರ್ಧ ತೆಗೆದು ಹುಚ್ಚಾಟ ಮೆರೆದಿದ್ದಾರೆ.
ಚಿರತೆ ಭಯವಾಗಿ ದಾಳಿಗೆ ಯತ್ನಿಸಿದಾಗ ತಕ್ಷಣ ಬಾಗಿಲು ಹಾಕಿದ್ದಾರೆ. ಅಧಿಕಾರಿಗಳ ಈ ಹುಚ್ಚಾಟದ ವಿಡಿಯೋ ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಪಾಯಕಾರಿ ಪ್ರಾಣಿಯ ಜೊತೆ ಈ ರೀತಿ ಹುಚ್ಚಾಟ ಆಡುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD