ಮನೆಗೆ ಬಡಿದ ಸಿಡಿಲು: ವಿದ್ಯುತ್ ಉಪಕರಣಗಳು, ಬಟ್ಟೆಬರೆ ಸುಟ್ಟು ಭಸ್ಮ

lightning strikes
14/05/2025

ಬೆಳ್ತಂಗಡಿ: ಮನೆಗೆ ಸಿಡಿಲು ಬಡಿದು   ವಿದ್ಯುತ್ ಪರಿಕರಗಳು, ಬಟ್ಟೆಬರೆಗಳು ಸುಟ್ಟು ಹೋಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಎಟ್ಲಾಯಿ ಎಂಬಲ್ಲಿ ಸಂಭವಿಸಿದೆ.

ಮಂಗಳವಾರ ಸಂಜೆ ರವಿ  ಎಂಬವರ ಮನೆ ಸಿಡಿಲು ಬಡಿದಿದ್ದು, ವಿದ್ಯುತ್ ಉಪಕರಣ ಮನೆಯಲ್ಲಿದ್ದ ಬಟ್ಟೆಬರೆಗಳು ಸುಟ್ಟು ಹೋಗಿದೆ. ಅಲ್ಲದೆ, ಈ ವೇಳೆಗೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಅವಾಗಲೇ ಮನೆಗೆ ಆಟೋದಲ್ಲಿ ಬಂದಿರುವ ಸಂಬಂಧಿಕರು ಹಾಗೂ ಆಟೋ ಚಾಲಕ ತಕ್ಷಣ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಸ್ಥಳಕ್ಕೆ  ಗ್ರಾಮ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ  ರವಿ ಅವರ ಪತ್ನಿ ಮತ್ತು ತಮ್ಮನ ಪತ್ನಿ ಇದ್ದರು. ಇವರ ಬೊಬ್ಬೆ ಕೇಳಿ ಆಟೋ ಚಾಲಕ ಹಾಗೂ ಸಂಬಂಧಿಕರು ಮನೆಗೆ ಹತ್ತಿಕೊಂಡಿರುವ ಬೆಂಕಿ ನಂದಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version