1:36 AM Saturday 25 - October 2025

ಇನ್ನೂ ಪ್ರಕಟವಾಗದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ!

bjp
11/04/2023

ದೆಹಲಿ : ರಾಜ್ಯ ವಿಧಾನಸಭಾ ಚುನಾವಣೆಗೆ ದಿಮಗಣನೆ ಶುರುವಾಗಿದೆಯಾದರೂ ಇನ್ನೂ ರಾಜ್ಯ ಬಿಜೆಪಿಗೆ ಅಭ್ಯರ್ಥಿಗಳ‌ ಪಟ್ಟಿ ಮಾತ್ರ ಬಿಡುಗಡೆಯಾಗಿಲ್ಲ.ಜೆಡಿಎಸ್ ಕಾಂಗ್ರೆಸ್ (ಮೂರನೇ ಪಟ್ಟಿ ಹೊರತುಪಡಿಸಿ)ಪಟ್ಟಿ ಬಿಡುಗಡೆಯಾಗಿದೆಯಾದರೂ  ಬಿಜೆಪಿ ಮಾತ್ರ ಇನ್ನೂ ತನ್ನ ಮೊದಲ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಿಜೆಪಿ ಲೆಕ್ಕಾಚಾರದತ್ತ ರಾಜಕೀಯದ ಚಿತ್ತ ನೆಟ್ಟಿದೆ.

ಮಾಹಿತಿಯ ಪ್ರಕಾರ ಅರುಣಾಚಲ ಪ್ರದೇಶದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ದೆಹಲಿಗೆ ವಾಪಸ್ಸಾದ ಬಳಿಕವೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಮಿತ್​ ಶಾ ದೆಹಲಿ ತಲುಪಲಿದ್ದು, ಇದಾದ ಬಳಿಕವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್​ ಆಗಲಿದೆ ಎನ್ನಲಾಗಿದೆ.

ನಿನ್ನೆಯಷ್ಟೇ ಈ ಕುರಿತು ಮಾತನಾಡಿದ್ದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಅಮಿತ್​ ಶಾ ಸದ್ಯ ಅರುಣಾಚಲ ಪ್ರದೇಶದಲ್ಲಿದ್ದು ಅವರು ಮಂಗಳವಾರ ದೆಹಲಿಗೆ ವಾಪಸ್ಸಾಗಲಿದ್ದಾರೆ. ನಾಳೆ ಅಥವಾ ಮಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಆಗಲಿದೆ ಎಂದಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version