11:08 AM Tuesday 20 - January 2026

ಲಾಬಿ ಮಾಡುತ್ತಿದ್ದರೆ ನಾನೂ ಮಂತ್ರಿಯಾಗುತ್ತಿದ್ದೆ | ಗದ್ಗದಿತರಾದ ಶಾಸಕ ರೇಣುಕಾಚಾರ್ಯ

renukacharya
04/08/2021

ಬೆಂಗಳೂರು: ಕಾಡಿ ಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ, ಲಾಬಿ ಮಾಡಿದ್ರೆ, ನಾನು ಕೂಡ ಮಂತ್ರಿಯಾಗುತ್ತಿದ್ದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗದ್ಗದಿತರಾಗಿದ್ದಾರೆ.

ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ ಬೆನ್ನಲ್ಲೇ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು. ಯಡಿಯೂರಪ್ಪನವರನ್ನು  ಬದಲಿಸಬಾರದು ಎಂದು ನೀವು ಸಹಿ ಸಂಗ್ರಹ ಮಾಡಿದ್ರಿ, ಆದ್ರೂ ತಮಗೆ ಸಚಿವ ಸ್ಥಾನ ಸಿಗಲಿಲ್ಲವೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಏನೇ ಮಾತನಾಡಿದರೂ, ಸಚಿವ ಸ್ಥಾನ ಸಿಗದ ಅಸಮಾಧಾನದಲ್ಲಿ ಮಾತನಾಡಿದ್ದೇನೆ ಎಂದಾಗುತ್ತದೆ. ಹಾಗಾಗಿ ಹಳೆಯ ವಿಚಾರ ಕೆದಕುವುದು ಬೇಡ ಎಂದು ಹೇಳಿದರು.

ಅಧಿಕಾರಕ್ಕೋಸ್ಕರ ಅಂಟಿಕೊಳ್ಳುವವನು ನಾನಲ್ಲ,  ನಾನು ಕೆಲಸ ಮಾಡುತ್ತೇನೆ. ಅಧಿಕಾರ ನನ್ನ ಹಿಂದೆ ಬರಬೇಕು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಲಾಬಿ ಮಾಡಿಲ್ಲ. ಕ್ಷೇತ್ರದಲ್ಲಿ ಕೆರೆ ಕಟ್ಟೆ ಹೊಡೆದು ಬೆಳೆ ನಾಶ ಆಗಿತ್ತು. ಅಲ್ಲಿ ಸಮೀಕ್ಷೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನಷ್ಟು ಸುದ್ದಿಗಳು…

ಬ್ರೇಕಿಂಗ್ ನ್ಯೂಸ್: ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ | ಯಾರಿಗೆಲ್ಲ ಒಲಿಯಿತು ಸಚಿವ ಸ್ಥಾನ?

ಸಿಎಂ ರೇಸ್ ನಲ್ಲಿದ್ದ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ | ಶೆಟ್ಟರ್, ಬಿಎಸ್ ವೈಗೆ ಧಿಕ್ಕಾರ ಹೇಳಿದ ಬೆಂಬಲಿಗರು

ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ವಾರ್ಡ್ ಬಾಯ್ ನಿಂದ ಅತ್ಯಾಚಾರ!

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಇತ್ತೀಚಿನ ಸುದ್ದಿ

Exit mobile version