3:44 AM Thursday 15 - January 2026

ಲಾಡ್ಜ್ ನಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ

thumakuru
16/03/2022

ತುಮಕೂರು: ತುಮಕೂರಿನ ಹೊಟೇಲ್‌ವೊಂದರಲ್ಲಿ ಪತ್ನಿಯ ಕಾಲನ್ನೇ ಪತಿ ಕತ್ತರಿಸಿರುವ ಘಟನೆ ಬಗ್ಗೆ ಇಂದು ಬೆಳಗ್ಗೆ  ವರದಿಯಾಗಿದೆ.

ಆರೋಪಿಯನ್ನು ಗದಗ ಮೂಲದ ಬಾಬು (34) ಎಂದು ಗುರುತಿಸಲಾಗಿದ್ದು, ಅನಿತಾ ಗಾಯಗೊಂಡ ಮಹಿಳೆಯಾಗಿದ್ದಾಳೆ. ಆರೋಪಿ ಬಾಬು ನಾಲ್ಕು ವರ್ಷದ ಹಿಂದೆ ಮಧುಗಿರಿ ಮೂಲದ ಅನಿತಾಳನ್ನು ಮದುವೆಯಾಗಿದ್ದ. ಆದರೆ ದಂಪತಿ ನಡುವೆ ಪದೇ ಪದೇ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ದಂಪತಿ ತುಮಕೂರಿನ ಲಾಡ್ಜ್‌ ವೊಂದಕ್ಕೆ ಬಂದಿದ್ದರು. ಈ ವೇಳೆ ಅನಿತಾಳ ಕಾಲು ಕತ್ತರಿಸಿ, ತಾನೇ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ನಂತರ ಹೊಟೇಲ್ ಮಾಲಕರಿಗೆ ಕರೆ ಮಾಡಿ, ನಾಲ್ವರು ಹುಡುಗರನ್ನು ಕಳುಹಿಸಿ, ಹೆಂಡತಿಯ ಕಾಲು ಕತ್ತರಿಸಿದ್ದೇನೆ ಆಸ್ಪತ್ರೆಗೆ ಸೇರಿಸಬೇಕು ಎಂದು ತಿಳಿಸಿದ್ದಾನೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಅನಿತಾ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ಆರೋಪಿಯನ್ನು ತುಮಕೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ

Exit mobile version