8:54 PM Thursday 15 - January 2026

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ನಿವೃತ್ತಿ ಘೋಷಣೆ

vishwanatha shetty
24/01/2022

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ವಿಶ್ವನಾಥ ಶೆಟ್ಟಿಯವರು ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ.

ಈ ಸಂಬಂಧ ಇಂದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಕೆಲಸ ಮಾಡೋದಕ್ಕೆ ಸಹಕರಿಸಿದಂತ ಎಲ್ಲರನ್ನು ಸ್ಮರಿಸಿ, ಧನ್ಯವಾದ ಹೇಳಿದ ಅವರು, ತಾವು ನಿವೃತ್ತಿ ಘೋಷಿಸೋದಕ್ಕೆ ಯಾವುದೇ ಒತ್ತಡ ಬಂದಿಲ್ಲ ಅಂತ ಹೇಳಿದರು.

ಮುಂದುವರಿದು ಮಾತನಾಡಿದ ಅವರು, ನನ್ನ ಕಾಲಾವಧಿಯಲ್ಲಿ ಎಲ್ಲಾ ಕೆಲಸವನ್ನು ತ್ವರಿತ, ದಕ್ಷತೆಯಿಂದ ಮಾಡಿದ್ದೇನೆ. ಲೋಕಾಯುಕ್ತಕ್ಕೆ ಅಧಿಕಾರವನ್ನು ಮೊಟಕುಗೊಳಿಸೋ ವಿಚಾರ, ತಾವು ಹುದ್ದೆ ಅಲಂಕರಿಸೋ ಮುಂಚೆಯೇ ಗೊತ್ತಿತ್ತು ಎಂದರು.

ಈ ಸಂದರ್ಭದಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ನಡೆದಂತ ಪ್ರಕರಣಗಳ ತನಿಖೆ, ವಿವಿಧ ಹಂತದ ತನಿಖೆಗಳ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಳಿಕ, ತಮ್ಮ ಲೋಕಾಯುಕ್ತ ಹುದ್ದೆಗೆ ನಿವೃತ್ತಿ ಘೋಷಿಸೋದಾಗಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಚಿಂತಾಜನಕ ಸ್ಥಿತಿಯಲ್ಲಿ ಸಂತ್ರಸ್ತೆ

ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ?: ಶಾಸಕ ರೇಣುಕಾಚಾರ್ಯ

ಯೆಮೆನ್ ಬಂಡುಕೋರರ ದಾಳಿ: ಇಬ್ಬರು ಭಾರತೀಯರ ಸಾವು

ಮತ್ತೋರ್ವ ಬಿಜೆಪಿ ಶಾಸಕ ರಾಜೀನಾಮೆ; ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಇತ್ತೀಚಿನ ಸುದ್ದಿ

Exit mobile version