9:11 AM Wednesday 15 - October 2025

“ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ”

fack love
05/08/2021

ಲಕ್ನೋ: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮವಾಗಿದ್ದು, ಅಂತಹ ಪ್ರಕರಣಗಳನ್ನು ನಿರ್ವಹಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ವ್ಯಕ್ತಿಯ ವಿರುದ್ಧ  ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಈ ದೂರಿಗೆ ಸಂಬಂಧಿಸಿದಂತೆ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್,  ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟಿದೆ.

ಅತ್ಯಾಚಾರವು ಸಮಾಜದಲ್ಲಿ ಅತ್ಯಂತ ಖಂಡನೀಯ ಅಪರಾಧವಾಗಿದೆ. ಇದರ ಸಂತ್ರಸ್ತೆಯ ಮೇಲೆ ದೀರ್ಘ ಕಾಲದವರೆಗೂ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಕೂಡ ಅತ್ಯಾಚಾರಕ್ಕೆ ಸಮ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾ.ಪ್ರದೀಪ್ ಕುಮಾರ್ ಶ್ರೀವಾಸ್ತವ್ ನೇತೃತ್ವದ ಪೀಠ ಹೇಳಿದೆ.

ಆರೋಪಿಯು ಸಂತ್ರಸ್ತೆಗೆ ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗುವುದಾಗಿ ಸುಳ್ಳು ಭರವಸೆಯನ್ನು ನೀಡುತ್ತಾನೆ. ಆರೋಪಿಗಳು ಕಾನೂನಿನ ಲಾಭ ಪಡೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವುದರಿಂದ ಅಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಪೀಠ ಹೇಳಿದೆ.

ಇನ್ನಷ್ಟು  ಸುದ್ದಿಗಳು…

ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿಯಾಗುತ್ತಿದ್ದಾತನನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್ ಐ!

ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ  ಕಿರುಕುಳ | ಆರೋಪಿ ಅರೆಸ್ಟ್

ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿಯಿಂದ ದೂರು: ನಟಿಯರೊಂದಿಗೆ ಅಕ್ರಮ ಸಂಬಂಧ, ಮಾದಕ ವ್ಯಸನದ ಆರೋಪ

ಲಾಡ್ಜ್ ನಲ್ಲಿ ಬಾಲಕನ ಅತ್ಯಾಚಾರ | ಮದ್ರಸ ಶಿಕ್ಷಕನಿಗೆ 11 ವರ್ಷ ಜೈಲು

ಇತ್ತೀಚಿನ ಸುದ್ದಿ

Exit mobile version