11:03 AM Saturday 23 - August 2025

ಮಗ ಮೃತಪಟ್ಟಿರುವುದು ತಿಳಿಯದೇ ಇಡೀ ರಾತ್ರಿ ಶುಶ್ರೂಷೆ ಮಾಡಿದ ತಾಯಿ!

25/02/2021

ಮುಂಬೈ: ರಾತ್ರಿ ಬಾತ್ ರೂಮ್ ನಲ್ಲಿ ಮಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಇದರ ಅರಿವಿಲ್ಲದ ತಾಯಿ ಇಡೀ ರಾತ್ರಿ ಮಗನ ಮೃತದೇಹಕ್ಕೆ ಶುಶ್ರೂಷೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮೇಘಾಲಯ ಮೂಲದ ಕುಟುಂಬದ ಇಬ್ಬರು ಗಂಡು ಮಕ್ಕಳು ಮತ್ತು ತಾಯಿ ಜೊತೆಯಾಗಿ ವಾಸಿಸುತ್ತಿದ್ದರು. ಈ ತಾಯಿಯ ಓರ್ವ ಮಗನಿಗೆ ಕಾಲಿನಲ್ಲಿ ಸ್ವಾಧೀನವಿಲ್ಲ. ಇದೀಗ ಮೃತಪಟ್ಟಿರುವ ಮಗ ಈ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ.

ರಾತ್ರಿ ಬಾತ್ ಗೆ ಹೋಗಿದ್ದ ಯುವಕ ಆಯ ತಪ್ಪಿ ಬಿದ್ದಿದ್ದಾನೆ. ಬಿದ್ದ ವೇಳೆ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಗ ತುಂಬಾ ಹೊತ್ತಾಗಿ ಬರದೇ ಇರುವುದನ್ನು ಗಮನಿಸಿ ತಾಯಿ ಬಾತ್ ರೂಮ್ ಗೆ ಹೋಗಿದ್ದು, ಈ ವೇಳೆ ಮಗ ಬಿದ್ದಿರುವುದು ಕಂಡು, ಹಾಲ್ ಗೆ ಹೇಗೋ ಎಳೆದುಕೊಂಡು ಬಂದಿದ್ದಾರೆ.

ಹಾಲ್ ನಲ್ಲಿ ಮಗನ ತಲೆಗೆ ಅರಿಶಿಣ ಹಾಕಿ ಬಟ್ಟೆ ಕಟ್ಟಿ ಶುಶ್ರೂಷೆ ಮಾಡಿದ್ದಾಳೆ. ಇಡೀ ರಾತ್ರಿ ಮಗನಿಗೆ ಆರೈಕೆ ಮಾಡಿದರೂ ಮಗ ಏಳದೇ ಇದ್ದಾಗ ಆತಂಕಗೊಂಡ ಮಹಿಳೆ ಸ್ಥಳೀಯರಿಗೆ ತಿಳಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಆತ ಮೃತಪಟ್ಟು ಕೆಲವು ಗಂಟೆಗಳೇ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version