‘ಮಹಾ’ ಚುನಾವಣೆ: ಮಹಾಯುತಿ ಕೂಟಕ್ಕೆ ಪ್ರಚಂಡ ಗೆಲುವು; ಸಿಎಂ ಗಾದಿ ಮೇಲೆ ಎಲ್ಲರ ಕಣ್ಣು

ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಯು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು, ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಸಿಎಂ ಗಾದಿ ಏರುವ ಸಾಧ್ಯತೆಗಳು ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ಜರುಗಿದರೆ, ಮಹಾರಾಷ್ಟ್ರದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿಯಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ: ಮರಾಠ ರಾಜಕಾರಣ, ಆ ಸಮುದಾಯದ ರಾಜಕಾರಣಿಗಳ ಹಿಡಿತ, ಆರ್‌ಎಸ್‌ಎಸ್ ಪ್ರಭಾವ ಇರುವ ರಾಜ್ಯದಲ್ಲಿ 54 ವರ್ಷದ ದೇವೇಂದ್ರ ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ. ಅಖಂಡ ಶಿವಸೇನೆಯ ಮನೋಹರ್ ಜೋಶಿ ಸಿಎಂ ಆದ ಮೊದಲ ಬ್ರಾಹ್ಮಣರಾಗಿದ್ದರು.
ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸಾರ್ಹ ನಾಯಕ.
ಜನಸಂಘ ಮತ್ತು ನಂತರದಲ್ಲಿ ಬಿಜೆಪಿಯ ನಾಯಕರಾಗಿದ್ದ ದಿವಂಗತ ಗಂಗಾಧರ್ ಫಡ್ನವಿಸ್ ಅವರ ಪುತ್ರರಾದ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ರನ್ನು ‘ರಾಜಕೀಯ ಗುರು’ ಎಂದು ಸಂಭೋದಿಸುತ್ತಾರೆ..
2024 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಜಯದ ಹಳಿಗೆ ತಂದಿರುವ ಫಡ್ನವೀಸ್, ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ ಎಂಬದು ಎಲ್ಲರ ಕುತೂಹಲವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj