12:58 PM Thursday 16 - October 2025

ಶಾಕಿಂಗ್ ನ್ಯೂಸ್: ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಗೆ 90 ಮಂದಿ ಬಲಿ

black fungus
20/05/2021

ಮುಂಬೈ:  ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ನಿಂದ ಈವರೆಗೆ 90 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆ ಹೇಳಿದ್ದು. ಕೊರೊನಾ ಪತ್ತೆಯಾದವರಲ್ಲಿ ಈ ವೈರಸ್ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರವಾಗಿ ಏರಿಕೆಯಾದ ಬೆನ್ನಲ್ಲೇ ಇದೀಗ ಬ್ಲಾಕ್ ಫಂಗಸ್ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಮೃತಪಟ್ಟ 90 ಮಂದಿ ಯಾವಾಗ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಸಚಿವರು ಮಾಹಿತಿ ನೀಡಿಲ್ಲ.

ಬ್ಲಾಕ್ ಫಂಗಸ್ ನಿಂದ 90 ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಇದೊಂದು ಗಂಭೀರವಾದ ಕಾಯಿಲೆಯಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಸಚಿವರು ಹೇಳಿದ್ದಾರೆ. ಇದರನ್ನು ನಿಭಾಯಿಸಲು ಸರ್ಕಾರ ನಿಯಮಗಳನ್ನು ಸಿದ್ಧಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version