7:46 PM Saturday 18 - October 2025

ಯುವತಿಯ ಬರ್ಬರ ಹತ್ಯೆ

19/11/2020

ಮಂಡ್ಯ: ಯುವತಿಯ ಅಂಗಾಂಗ  ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದ್ದು, ಹತ್ಯೆಯ ಬಳಿಕ ಹೇಮಾವತಿ ನದಿಗೆ ಯುವತಿಯ ದೇಹದ ಭಾಗಗಳನ್ನು ಎಸೆಯಲಾಗಿದೆ.

ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಬಳಿಯಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ದೇಹದ ಅಂಗಗಳು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಾಲೆಯಲ್ಲಿ ಯುವತಿಯ ಕೈಯಲ್ಲಿ ಮೀನಿನ ಚಿತ್ರ ವಿರುವ ಹಚ್ಚೆ ಗುರುತು ಇದೆ. ಮೃತ ಯುವತಿಯ ಗುರುತು ಪತ್ತೆ ಇನ್ನೂ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version