5:47 PM Wednesday 15 - October 2025

ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟಕ್ಕೆ ಯತ್ನ

crime news
12/02/2022

ಬೆಂಗಳೂರು: ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಯುವತಿ, ಕೋಲಾರದಿಂದ ಬೆಂಗಳೂರಿಗೆ ಕೆಲಸವನ್ನರಸಿಕೊಂಡು ಬಂದು ಮೆಜೆಸ್ಟಿಕ್​ ನಲ್ಲಿ ಕೂತಿದ್ದಳು. ಈ ವೇಳೆ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಯುವತಿಯ ಬಳಿ ಬಂದು ಆಕೆಯನ್ನು ವಿಚಾರಿಸಿದ್ದಾನೆ. ಆಗ ಆಕೆ ಎಲ್ಲಾ ವಿಷಯವನ್ನು ಹಂಚಿಕೊಂಡಿದ್ದಾಳೆ. ಬಳಿಕ ಕೆಲಸ ಕೊಡಿಸುವುದಾಗಿ ನಂಬಿಸಿ ದೇವನಹಳ್ಳಿಗೆ ಕರೆದುಕೊಂಡು ಬಂದು ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ನಂತರ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಪೋರ್ಟ್‌ ಭದ್ರತಾ ಪಡೆ ಸಿಐಎಸ್ಎಫ್‌ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ಯುವತಿಯ ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಕೆಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದುವೆ ಆರತಕ್ಷತೆ ವೇಳೆ ಕುಸಿದ ಬಿದ್ದ ವಧುವಿನ ಮೆದುಳು ನಿಷ್ಕಿಯ: ಪೋಷಕರಿಂದ ಅಂಗಾಂಗ ದಾನಕ್ಕೆ ನಿರ್ಧಾರ

ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೇ ಕೊಂದ ಪಾಪಿ ಮಗ!

ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ

ಲಿಬಿಯಾ ಪ್ರಧಾನಿಯ ಬೆಂಗಾವಲು ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ

ಇತ್ತೀಚಿನ ಸುದ್ದಿ

Exit mobile version