10:04 AM Wednesday 22 - October 2025

ಫಾಝಿಲ್ ಕುಟುಂಬಕ್ಕೆ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿಯಿಂದ 1.20 ಲಕ್ಷ ಪರಿಹಾರ

fazil
13/08/2022

ಮಂಗಳೂರು: ನಗರದ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 1.20 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು.

ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ನೇತೃತ್ವದಲ್ಲಿ ಫಾಝಿಲ್ ಮನೆಗೆ ತೆರಳಿದ ಬಜ್ಪೆ ಜಮಾಅತ್ ನಿಯೋಗವು ಫಾಝಿಲ್ ರ ಮಗ್ಫಿರತ್ ಗಾಗಿ ಪ್ರಾರ್ಥಿಸಿ ಕುಟುಂಬಕ್ಕೆ ಪರಿಹಾರವನ್ನು ವಿತರಿಸಿ ಸಾಂತ್ವನ ಹೇಳಿತು.

ಈ ನಿಯೋಗದಲ್ಲಿ ಮಸೀದಿಯ ಖತೀಬ್ ಮೌಲಾನ ಮನ್ಸೂರ್ ಸಅದಿ, ಪ್ರಧಾನ ಕಾರ್ಯದರ್ಶಿ ಹುಸೇನ್  ಸಿರಾಜ್, ಉಪಾಧ್ಯಕ್ಷರಾದ  ಹನೀಫ್,  ಅಜ್ಮಲ್ ಅಲಿ,  ಇಸ್ಮಾಯೀಲ್  ಜಾವಲಿ, ಹಮೀದ್ ಜರಿ, ಅಬೂಬಕರ್, ಇಬ್ರಾಹೀಂ ಹಾಜಿ, ಇಸ್ಮಾಯೀಲ್ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version