8:24 PM Saturday 18 - October 2025

ಗೃಹಪ್ರವೇಶದ ಮನೆಗೆ ನುಗ್ಗಿ 25 ಸಾವಿರ ಹಣಕ್ಕೆ ಬೇಡಿಕೆಯಿಟ್ಟು ಮಂಗಳಾಮುಖಿಯರಿಂದ ದಾಂಧಲೆ

mangala mukhi
24/06/2022

ಬೆಂಗಳೂರು : ಗೃಹ ಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆಯಲ್ಲಿ ಮಂಗಳ ಮುಖಿಯರ ಗುಂಪೊಂದು ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ಕಲ್ಕೆರೆಯಲ್ಲಿ ನಡೆದಿದೆ.

ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆಯ ಚನ್ನಸಂದ್ರದ ಪೂಜಾ ಗಾರ್ಡನ್‌ನ 2ನೇ ಹಂತದಲ್ಲಿ ಲೋಕೇಶ್‌ ಎಂಬವರು ಮನೆಯೊಂದನ್ನು ಕಟ್ಟಿಸಿದ್ದರು. ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ಮನೆಯಲ್ಲಿ ಪೂಜೆಯನ್ನು ನಡೆಸುತ್ತಿದ್ದರು. ಈ ವೇಳೆಯಲ್ಲಿ ಮನೆಗೆ ನುಗ್ಗಿದ ಮಂಗಳ ಮುಖಿಯರ ಗುಂಪು10 ರೂಪಾಯಿಯ ನೋಟಿನಲ್ಲಿ ಮನೆಗೆ ದೃಷ್ಟಿ ತೆಗೆದಿದ್ದಾರೆ. ನಂತರ 25 ಸಾವಿರ ರೂಪಾಯಿ ನೀಡುವಂತೆ ಮನೆ ಮಾಲೀಕನ ಬಳಿಯಲ್ಲಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

25 ಸಾವಿರ ಹಣ ನೀಡಲು ನಿರಾಕರಿಸಿದ ಮನೆ ಮಾಲೀಕ 1 ಸಾವಿರ ರೂಪಾಯಿ ನೀಡುತ್ತಿದ್ದಂತೆಯೇ ಸಿಟ್ಟಾದ ಮಂಗಳ ಮುಖಿಯರು ಮನೆ ಮಾಲೀಕನ ಪತ್ನಿ, ಮನೆಯವರಿಗೆ ಹಲ್ಲೆ ನಡೆಸಿದ್ದು, ನಂತರದಲ್ಲಿ ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಕ್ಕೆ ಆರಂಭಿಸಿದ್ದಾರೆ. ಅಲ್ಲದೇ ಮನೆಯವರ ಮುಂದೆಯೇ ಅಸಭ್ಯವಾಗಿ ವರ್ತಿಸಿದ್ದಾರೆನ್ನಲಾಗಿದೆ.

ಕೊನೆಗೆ ಮನೆ ಮಾಲೀಕರು ಮಂಗಳಮುಖಿಯರನ್ನು ಮನೆಯಿಂದ ಹೊರಹೋಗುವಂತೆ ತಿಳಿಸಿದ್ದಾರೆ. ಈ ವೇಳೆಯಲ್ಲಿ ಕೋಪಗೊಂಡ ಮಂಗಳಮುಖಿಯರು ಲೋಕೇಶ್‌ ಪತ್ನಿ ಆಶಾ ಅವರ ಕೆನ್ನೆಗೆ ಬಾರಿಸಿದ್ದು, ಮಾವ ಸೊನ್ನೆಗೌಡ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.ಅಲ್ಲದೇ ಮನೆಯ ಮುಂದೆ ಇರಿಸಿದ್ದ ಕುರ್ಚಿಗಳನ್ನು ಒಡೆದು, ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮನೆಯವರು ಕೂಡಲೇ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಮಂಗಳಮುಖಿಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನು ಮನೆ ಮಾಲೀಕ ಲೋಕೇಶ್‌ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಕೂಟರ್ ಶೋ ರೂಮ್‌ ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಬೈಕ್ ಬೆಂಕಿಗಾಹುತಿ

50 ಅಡಿ ಆಳಕ್ಕೆ ಉರುಳಿ ಬಿದ್ದ ಬಸ್ : ಐವರು ಸ್ಥಳದಲ್ಲೇ ಸಾವು

50 ಅಡಿ ಆಳಕ್ಕೆ ಉರುಳಿ ಬಿದ್ದ ಬಸ್ : ಐವರು ಸ್ಥಳದಲ್ಲೇ ಸಾವು

ಭ್ರಷ್ಟಾಚಾರದ ದುಡ್ಡಿನಿಂದ ಆಪರೇಷನ್ ಕಮಲ: ಸಿದ್ದರಾಮಯ್ಯ ಆರೋಪ

ಇತ್ತೀಚಿನ ಸುದ್ದಿ

Exit mobile version