ಸಿಡಿಲು ಬಡಿದು ವ್ಯಕ್ತಿಯ ಕಾಲು, ಕಿಡ್ನಿ ವೈಫಲ್ಯ: ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಟ್ಟಿಗೆಹಾರ: ಕಳೆದ ಗುರುವಾರ ಬೆಟ್ಟಗೆರೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವರು ಗಂಭೀರ ಗಾಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಟ್ಟಗೆರೆಯ ಗದ್ಗೋಡು ಗ್ರಾಮದ ಲಕ್ಷ್ಮಣ ಶೆಟ್ಟಿ ಗಂಭೀರ ಗಾಯಗೊಂಡಿರುವ ವ್ಯಕ್ತಿ. ಮಂಗಳವಾರ ರಾತ್ರಿ 8:30 ಸಮಯದಲ್ಲಿ ಮನೆಗೆ ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ ಲಕ್ಷ್ಮಣ ಅವರ ಕಾಲು ಹಾಗೂ ಕಿಡ್ನಿ ವೈಫಲ್ಯವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ ದರ್ಶನ್ ತಿಳಿಸಿದ್ದಾರೆ.
ಇವರು ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ಸಿಡಿಲು ಬಡಿಯುವಾಗ ಲಕ್ಷ್ಮಣ್ ಪತ್ನಿ ಕೂಡ ಮನೆಯಲಿದ್ದರು. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ಭೇಟಿ : ಸಿಡಿಲು ಬಡಿದಿರುವ ಗದ್ಗೋಡು ಗ್ರಾಮದ ಲಕ್ಷ್ಮಣ ಅವರ ಮನೆಗೆ ಗ್ರಾಮದ ಲೆಕ್ಕಾಧಿಕಾರಿ ಉಮೇಶ್, ಪಿಡಿಓ ದರ್ಶನ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.ಗಾಯಾಳುಗೆ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth