ಮೂಡುಬಿದಿರೆ | ಪ್ರತಿಭಾ ಕಾರಂಜಿಯಲ್ಲಿ ಪಾರಮ್ಯ ಮೆರೆದ ಮರಿಯಮ್ ನಿಕೇತನ ಆಂಗ್ಲ ಮಾಧ್ಯಮ ಶಾಲೆ
ಮೂಡುಬಿದಿರೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ , ಮೂಡುಬಿದಿರೆ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚರಕಟ್ಟೆ ಇವರ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚರಕಟ್ಟೆ ಬೆಳುವಾಯಿ, 2025–26ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆದಿದ್ದು, ಅದರಲ್ಲಿ ಬೆಳುವಾಯಿಯ ಮರಿಯಮ್ ನಿಕೇತನ ಆಂಗ್ಲ ಮಾಧ್ಯಮ ಶಾಲೆಯು ಕಿರಿಯ ವಿಭಾಗ, ಹಿರಿಯ ವಿಭಾಗ ಹಾಗೂ ಪ್ರೌಢ ವಿಭಾಗ ಈ ಮೂರು ವಿಭಾಗದಲ್ಲೂ ಹೆಚ್ಚು ಪ್ರಶಸ್ತಿ ಪತ್ರಗಳನ್ನು ಬಾಚಿಕೊಂಡು ಸಮಗ್ರ ಪ್ರಶಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
“ಪ್ರಥಮ—20, ದ್ವಿತೀಯ—13, ತೃತೀಯ—4, ಒಟ್ಟು 37 ಪ್ರಶಸ್ತಿ ಪತ್ರಗಳನ್ನು ತಮ್ಮದಾಗಿಸಿಕೊಂಡು ಇತರರಿಗೆ ಪ್ರೇರಣೆಯಾಗಿದ್ದಾರೆ. ನಮ್ಮ ಕ್ರಿಯಾಶೀಲ ಶಿಕ್ಷಕರ ಅವಿರತ ಶ್ರಮ ಹಾಗೂ ನಮ್ಮ ವಿದ್ಯಾರ್ಥಿಗಳ ಛಲ ಬಿಡದ ಪ್ರಯತ್ನದ ಫಲವಾಗಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು” ಎಂದು ಮರಿಯಮ್ ನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಹರ್ಷ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.


ಪ್ರಥಮ ಬಹುಮಾನ ವಿಜೇತರು
1. ರಿಯಾಂತ್ ಜೈನ್ –- ಮಣ್ಣಿನ ಮಾದರಿ
2. ವಿಖ್ಯಾತ್ ಎಸ್ ಪೂಜಾರಿ — ಧಾರ್ಮಿಕ ಪಠಣ
3. ಶ್ರೀನಿಧಿ -– ಕವನ ವಾಚನ
4. ಅನರ್ಘ್ಯ ಜೈನ್ –- ಭಕ್ತಿ ಗೀತೆ
5. ವಿಯಾನ್ ನಝರೆತ್ -–ಛದ್ಮವೇಷ
6. ಮೊಹಮ್ಮದ್ ಫಾಹಿಕ್ -– ಅರೇಬಿಕ್ ಧಾರ್ಮಿಕ ಪಠಣ
7. ವೈಷ್ಣವಿ ಆಚಾರ್ಯ -–ಆಶು ಭಾಷಣ
8. ಆನ್ವಿ. ಎ. ಎಸ್ -– ದೇಶಭಕ್ತಿ ಗೀತೆ
9. ಸ್ಯಾಂಡ್ರಿಯಾ ತಾವ್ರೋ -– ಗಝಲ್
10. ಸೈಯ್ಯದ್ ಜಯೇನ್ -– ಮಿಮಿಕ್ರಿ
11.ಆ್ಯಶೆಲ್ ಡಿ’ಸೋಜಾ -– ಇಂಗ್ಲಿಷ್ ಕಂಠಪಾಠ
12.ಸಂಚಯ್ ಗುರ್ಜರ್ -– ಸಂಸ್ಕೃತ ಧಾರ್ಮಿಕ ಪಠಣ
13.ಮೊಹಮ್ಮದ್ ರಾಝಿನ್ -– ಅರೇಬಿಕ್ ಪಠಣ
14.ಫಾತಿಮಾ ಝೈನಬ್ ಶೇಖ್ -– ಹಿಂದಿ ಭಾಷಣ
15.ಸೈಯ್ಯದ್ ಜಯೇನ್ -– ಹಿಂದಿ ಕಂಠಪಾಠ
16.ಪ್ರಾಪ್ತಿ ಕೋಟ್ಯನ್ -– ಕನ್ನಡ ಕಂಠಪಾಠ
17.ಆನ್ವಿ. ಎ.ಎಸ್ -– ಕಥೆ ಹೇಳುವುದು
18.ಝಹರಾ ಫಾತಿಮಾ –- ಇಂಗ್ಲಿಷ್ ಕಂಠಪಾಠ
19.ಸಾನ್ವಿ –- ರಂಗೋಲಿ
20.ಶ್ರೀಜಾ ಸೂರಜ್ ಸುವರ್ಣ -– ಕವನ ವಾಚನ
ದ್ವಿತೀಯ ಬಹುಮಾನ ವಿಜೇತರು
21.ಅಭೀಕ್ಷಾ –- ಆಶುಭಾಷಣ
22. ಮನಸ್ವಿ -– ಚರ್ಚಾ ಸ್ಪರ್ಧೆ
23.ಆಶ್ರಿತಾ -– ಭಾವಗೀತೆ
24. ನಿಶಾನ್ -– ಸಂಸ್ಕೃತ ಧಾರ್ಮಿಕ ಪಠಣ
25. ವೈಷ್ಣವಿ ಆಚಾರ್ಯ -– ಕನ್ನಡ ಭಾಷಣ
26. ರೂಯೆಲ್ -– ಚಿತ್ರಕಲೆ
27. ನೀಲಿಮಾ -– ಚಿತ್ರಕಲೆ
28. ನಿಶಾನ್ -– ರಸಪ್ರಶ್ನೆ
29. ಸಾಕ್ಷಿತ್ -– ರಸಪ್ರಶ್ನೆ
30. ಸ್ಯಾಂಡ್ರಿಯಾ ತಾವ್ರೋ — ಇಂಗ್ಲಿಷ್ ಭಾಷಣ
31. ಅನ್ವಿತಾ -– ಅಭಿನಯಗೀತೆ
32. ಈವಾ ಪಿರೇರಾ -– ಕನ್ನಡ ಕಂಠಪಾಠ
33. ಅಯಾನ್ ಶೇಖ್ -– ಮಿಮಿಕ್ರಿ
ತೃತೀಯ ಬಹುಮಾನ ವಿಜೇತರು
34. ಧ್ರುವಿ ಪುಜಾರಿ -– ಕಥೆ ಹೇಳುವುದು
35. ಸುಧಿತಿ-– ಜನಪದ ಗೀತೆ
36. ಪ್ರಿಯಾಲ್ -– ಚಿತ್ರಕಲೆ
37. ಶರಣ್ಯ -– ಕನ್ನಡ ಪ್ರಬಂಧ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























