ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮರಿಯಮ್ ನಿಕೇತನಕ್ಕೆ ಪ್ರಶಸ್ತಿಗಳ ಸುರಿಮಳೆ
ಮೂಡುಬಿದಿರೆ: 20ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಅಂಡ್ ಮೆಂಟಲ್ ಅರಿತ್ ಮೆಟಿಕ್ ಕಾಂಪಿಟೇಷನ್– 2025ರಲ್ಲಿ ಬೆಳುವಾಯಿಯ ಮರಿಯಮ್ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಮಹತ್ವದ ಸಾಧನೆಗೈದಿದ್ದಾರೆ.
ಮೂಡುಬಿದಿರೆಯ ಕೆ. ಅಮರನಾಥ ಶೆಟ್ಟಿ ವೇದಿಕೆ ಆಳ್ವಾಸ್ ಪಿಯು ಕ್ಯಾಂಪಸ್, ವಿದ್ಯಾಗಿರಿಯಲ್ಲಿ ಅ. 26ರಂದು ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ ಲಿಮಿಟೆಡ್ (Ideal Play Abacus India PVT LTD) ಹಮ್ಮಿಕೊಂಡಿದ್ದ ಸ್ಪರ್ಧೆ ಯಲ್ಲಿ ಒಟ್ಟು ಪ್ರಥಮ-4, 2nd Runner up—15, Cons—3, 3rd—1, 4th— 5, 5th—5 ಹೀಗೆ ಒಟ್ಟು 33 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಮ್ಮ ವಿದ್ಯಾರ್ಥಿಗಳು ತಮ್ಮ ಉತ್ಸಾಹ, ಚಾಕಚಕ್ಯತೆ ಹಾಗೂ ಪಾದರಸದಂತಹ ಚುರುಕುತನದಿಂದ ಈ ಸ್ಪರ್ಧೆಯನ್ನು ಗೆದ್ದು ನಮ್ಮ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇವರ ಸಾಧನೆ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತ ಲಸ್ರಾದೊರವರು ಹಾರೈಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























