1:16 PM Thursday 16 - October 2025

ಮಾಸ್ಕ್ ಹಾಕದ ಬಿಜೆಪಿ ಶಾಸಕಗೆ ದಂಡ ವಿಧಿಸಿದ ಬೆಂಗಳೂರು ಪೊಲೀಸರು

24/12/2020

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ  ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಆಡಳಿತ ಪಕ್ಷವಾದ ಬಿಜೆಪಿಯ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೂ ಪೊಲೀಸರು ದಂಡ ವಿಧಿಸಿದ್ದು, ಅವರು ರಾಜ್ಯ ಗೃಹ ಸಚಿವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

mp kumaraswamy

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಇಂದು ಮಧ್ಯಾಹ್ನ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ.  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂ.ಪಿ.ಕುಮಾರಸ್ವಾಮಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ. ನೈಟ್ ಕರ್ಫ್ಯೂ ವಾಪಸ್ ಪಡೆದ ಸಿಎಂ ಯಡಿಯೂರಪ್ಪ

ಬಾಡಿಗೆ ಕಾರೊಂದರಲ್ಲಿ ಎಂ.ಪಿ.ಕುಮಾರಸ್ವಾಮಿ ಅವರು ಶೇಷಾದ್ರಿಪುರಂನಿಂದ ಶಾಸಕರ ಭವನಕ್ಕೆ ತೆರಳುತ್ತಿದ್ದರು. ಟ್ರಾಫಿಕ್ ನಲ್ಲಿ ಕಾರು ನಿಂತಿದ್ದ ವೇಳೆ  ಪೊಲೀಸರು ಕಾರಿನ ಗ್ಲಾಸ್ ಇಳಿಸುವಂತೆ ಹೇಳಿದ್ದಾರೆ. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ ಎಂದು ಪೊಲೀಸರು ದಂಡ ವಿಧಿಸಿದ್ದಾರೆ.

ತಾನು ಮಾಸ್ಕ್ ಧರಿಸಿದ್ದರೂ ಪೊಲೀಸರು ತನಗೆ ದಂಡ ವಿಧಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version