ವಿಶ್ವಕಪ್ ಗೆದ್ದ ರೋಹಿತ್ ಪಡೆ ತವರಿಗೆ: ಮೋದಿ ಜತೆ ‘ವಿಜಯದ’ ಮಾತುಕತೆ

04/07/2024

‘ನಮ್ಮ ಚಾಂಪಿಯನ್‌ಗಳೊಂದಿಗೆ ಒಂದು ಅದ್ಭುತ ಭೇಟಿ. 7ನೇ ಲೋಕ ಕಲ್ಯಾಣ ಮಾರ್ಗದಲ್ಲಿ ವಿಶ್ವಕ‍ಪ್ ಗೆದ್ದ ತಂಡಕ್ಕೆ ಆತಿಥ್ಯ ನೀಡಿ, ವಿಶ್ವಕಪ್ ಅನುಭವಗಳ ಕುರಿತು ನೆನಪಿನಲ್ಲಿ ಉಳಿಯಯವಂತಹ ಮಾತುಕತೆ ನಡೆಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವಕಪ್ ಗೆದ್ದ ಭಾರತ ತಂಡವು ಇಂದು ಬೆಳಿಗ್ಗೆ ಬಾರ್ಬಾಡೋಸ್‌ನ ಬ್ರಿಜ್‌ಟೌನ್‌ನಿಂದ ದೆಹಲಿಗೆ ಬಂದಿಳಿಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು. ಆಟಗಾರರು ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಉಪಾಹಾರ ಸವಿದರು. ಸುಮಾರು ಎರಡು ಗಂಟೆಗಳ ಕಾಲ ಕಳೆದರು.

ಈ ವಿಡಿಯೋವೊಂದನ್ನು ‍ಪ್ರಧಾನ ಮಂತ್ರಿ ಕಾರ್ಯಾಲಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಟಗಾರರು ಪ್ರಧಾನಿ ಮೋದಿಯವರ ಸುತ್ತ ವೃತ್ತಾಕಾರದಲ್ಲಿ ಕುಳಿತಿರುವುದು ಕಾಣಬಹುದಾಗಿದೆ.
ತಂಡದ ಸದಸ್ಯರೊಂದಿಗೆ ಪ್ರಧಾನಿ ಮೋದಿಯವರು ಫೋಟೊ ತೆಗೆಸಿಕೊಂಡಿದ್ದು, ಆಟಗಾರರು ‘ಚಾಂಪಿಯನ್ಸ್‌’ ಎಂದು ಬರೆದಿರುವ ಜೆರ್ಸಿ ತೊಟ್ಟಿದ್ದರು.

ಇದೇ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಕ್ರಿಕೆಟ್ ತಂಡದ ಜೆರ್ಸಿ ಉಡುಗೊರೆಯಾಗಿ ನೀಡಿದರು. ಅದರಲ್ಲಿ ‘ನಮೊ’ ಎಂದು ಬರೆಯಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version