4:21 AM Wednesday 15 - October 2025

ಸಿದ್ದರಾಮಯ್ಯ ಅಧಿಕಾರವಧಿಯಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಕರಡು ಸಿದ್ಧವಾಗಿತ್ತೇ? | ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಏನು?

siddaramaiha
24/12/2021

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಆರ್‌ ಎಸ್‌ ಎಸ್‌ ಮತ್ತು ಬಿಜೆಪಿ ಸರ್ಕಾರದ ಕೂಸು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್‌ ಎಸ್‌ ಎಸ್‌ ಬೆಂಬಲಿಗರ ತಂಡ ಮತಾಂತರ ನಿಷೇಧ ಕರಡು ಕಾಯ್ದೆ ರೂಪಿಸುವಂತೆ ಕಾನೂನು ಆಯೋಗಕ್ಕೆ ಮನವಿ ನೀಡಿತ್ತು. ನಮ್ಮ ಸರ್ಕಾರ ಆ ಕರಡನ್ನು ತಿರಸ್ಕರಿಸಿತ್ತು. ಈಗ ಮತ್ತೆ ಬಿಜೆಪಿ ಅದಕ್ಕೆ ಜೀವ ನೀಡುತ್ತಿದೆ ಎಂದರು.

ಕಾನೂನು ಆಯೋಗಕ್ಕೆ ಮನವಿ ನೀಡಿದ್ದ ಆರ್‌ ಎಸ್‌ ಎಸ್‌ ಬೆಂಬಲಿಗರ ತಂಡದಲ್ಲಿ ಚಿದಾನಂದ ಮೂರ್ತಿ, ನರಹರಿ, ಬಿ.ಎನ್. ಮೂರ್ತಿ, ಜೈದೇವ್, ಆರ್.ಲೀಲಾ, ಮತ್ತೂರ್ ಕೃಷ್ಣಮೂರ್ತಿ ಇದ್ದರು. ನಮ್ಮ ಸರ್ಕಾರದ ಕಾಲದಲ್ಲಿ ಕಾನೂನು ಇಲಾಖೆಯ ಕೈ ಸೇರಿದ್ದ ಕರಡು ಕಾನೂನನ್ನು 2015ರಲ್ಲಿಯೇ ತಿರಸ್ಕರಿಸಿದ್ದೆವು ಎಂದರು..

ಕರಡನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ ಎಂದು ಅವರು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

ನನ್ನ ಕೆಲಸ ಬೆಣ್ಣೆ ಹಚ್ಚುವುದಲ್ಲ: ರವಿಚಂದ್ರನ್ ಅಶ್ವಿನ್ ಗೆ ರವಿಶಾಸ್ತ್ರಿ ತಿರುಗೇಟು

ಕೊವಿಡ್ ಸೋಂಕಿಗೊಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆ  ಕುಸಿತ!

ಫುಡ್​ ಡೆಲಿವರಿ ವಿಳಂಬ: ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ನಲ್ಲಿ ಎನ್‌ ಕೌಂಟರ್: ಓರ್ವ ಉಗ್ರನ ಹತ್ಯೆ

ಮೀನುಗಾರನನ್ನು ತಲೆಕೆಳಗಾಗಿ ನೇತು ಹಾಕಿ ಹಲ್ಲೆ: ಆರು ಮಂದಿ ಆರೋಪಿಗಳು ಅರೆಸ್ಟ್

 

ಇತ್ತೀಚಿನ ಸುದ್ದಿ

Exit mobile version