10:41 AM Thursday 16 - October 2025

ಮುಸ್ಲಿಮರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮಲತಾಯಿ ಧೋರಣೆ: ಮಾಯಾವತಿ ಖಂಡನೆ

04/03/2025

ಮುಸ್ಲಿಮರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಖಂಡಿಸಿದ್ದಾರೆ. ಎಲ್ಲಾ ಧರ್ಮೀಯರನ್ನು ಸಮಾನವಾಗಿ ನೋಡಬೇಕಾಗಿದೆ. ಆದರೆ ಸರಕಾರಗಳು ಮುಸ್ಲಿಮರ ಬಗ್ಗೆ ಮಲತಾಯಿ ಧೋರಣೆ, ತೋರಿಸುತ್ತಿವೆ ಎಂದವರು ಟೀಕಿಸಿದ್ದಾರೆ.

ಇಂಥ ಧೋರಣೆ ಸರಿಯಲ್ಲ. ಈ ತಾರತಮ್ಯ ನೀತಿಯು ಸಮಾಜದ ಶಾಂತಿಗೆ ಮತ್ತು ಐಕ್ಯಕ್ಕೆ ಹಾನಿಕರವಾಗಿದೆ. ಇದು ಆತಂಕಕಾರಿ ಎಂದು ಹಿಂದಿಯಲ್ಲಿ ಮಾಡಿದ ಟ್ವಿಟ್ ನಲ್ಲಿ ಅವರು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲಾ ಧರ್ಮಿಯರನ್ನು ತಾರತಮ್ಯವಿಲ್ಲದೆ ನಡೆಸಿಕೊಳ್ಳಬೇಕು. ಮುಸ್ಲಿಮರನ್ನು ಉತ್ತರಪ್ರದೇಶ ಸರಕಾರ ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳಲಾಗದು. ಎಲ್ಲಾ ಧರ್ಮಗಳ ಆಚರಣೆಗೆ ಸಂಬಂಧಿಸಿದಂತೆ ನಿಯಮಗಳು ಒಂದೇ ರೀತಿಯಲ್ಲಿ ಇರಬೇಕು. ಆದರೆ ಉತ್ತರ ಪ್ರದೇಶದಲ್ಲಿ ಅದು ಜಾರಿಯಲ್ಲಿಲ್ಲ. ಆದ್ದರಿಂದ ಸಮಾಜದಲ್ಲಿ ಶಾಂತಿ ಮತ್ತು ಪರಸ್ಪರ ವಿಶ್ವಾಸ ಕಡಿಮೆ ಆಗ್ತಾ ಇದೆ. ಇದು ಅತ್ಯಂತ ಆತಂಕ ಕಾರಿ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version